ಐ ಡಿ ಎಫ್ ಸಿ ಬ್ಯಾಂಕ್ ವಿರುದ್ಧ ವಂಚನೆ ಆರೋಪ
ಚಿಕ್ಕೋಡಿ : ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದ
ಐ ಡಿ ಎಫ್ ಸಿ ಬ್ಯಾಂಕ್ ಶಾಖೆ ಅಥಣಿಯ ಸಿಬ್ಬಂದಿಗಳ ವಿರುದ್ಧ ವಂಚನೆಯ ದೋಶಾರೋಪ ಅಡಿಯಲ್ಲಿ ಅಥಣಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಐ ಡಿ ಎಫ್ ಸಿ ಬ್ಯಾಂಕ್ ಸಿಬ್ಬಂದಿಗಳು ಬೈಕ್ ಲೋನ್ ವಸೂಲಿ ಮಾಡಿ ಗ್ರಾಹಕರ ಖಾತೆಗೆ ಜಮೆ ಮಾಡದೆ ಗ್ರಾಹಕರಿಗೆ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಬರದ ಬೇಗೆಯಲ್ಲಿರುವ ಜನರಿಗೆ ಐ ಡಿ ಎಫ್ ಸಿ ಬ್ಯಾಂಕ್ ಸಿಬ್ಬಂದಿಗಳ ಕಿರುಕುಳ ಹಾಗೂ ವಂಚನೆ ಬಗ್ಗೆ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರಿಗೆ ಮೋಸ ಮಾಡಿದ್ದಾರೆ ಈ ಕುರಿತಂತೆ ಬ್ಯಾಂಕ್ ಸಿಬ್ಬಂದಿಗಳು ಗ್ರಾಹಕರಿಗೆ ಉತ್ತಮ ಸ್ಪಂದನೆ ಹಾಗೂ ವಂಚನೆ ಬಗ್ಗೆ ಪ್ರತಿಕ್ರಿಯೆ ನೀಡದ ಬೆನ್ನಲ್ಲೆ ಬ್ಯಾಂಕ್ ಸಿಬ್ಬಂದಿ ವಿರುದ್ಧ ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*ವರದಿ.. ರಮೇಶ ಕಾಂಬಳೆ ಕನ್ನಡ ಟುಡೇ ನ್ಯೂಸ್ ರಿಪೋರ್ಟರ್ ಬೆಳಗಾವಿ**