ಸುರಪುರ : ಪ್ರಕೃತಿ ವಿಕೋಪದಿಂದ ಮನೆ ಜಖಂ : ಪರಿಹಾರಕ್ಕಾಗಿ ಶಾಸಕ ಡಾ.ಆರ್.ವಿ.ಎನ್.ಗೆ ಸಂತ್ರಸ್ತೆ ಮನವಿ
*ಸುರಪುರ* : *೪* ಯಾದಗಿರಿ ಜಿಲ್ಲೆಯ ಸುರಪುರ ನಗರಸಭೆ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ -20 ಹಸನಾಪುರದಲ್ಲಿ ಬರುವ ಆಸ್ತಿ ಸಂಖ್ಯೆ #ಇ/1/175/1ಎ ಮನೆಯು ಅಂಬ್ಲಮ್ಮ ಗಂಡ ಬಸವ ಚಲುವಾದಿ ಎಂಬ ಹೆಸರಿನಲ್ಲಿ ದಾಖಲಾತಿ ಹೊಂದಿರುತ್ತದೆ
ಸದರಿ ಮನೆಯು ಕಳೆದ ಜೂನ್ ತಿಂಗಳಲ್ಲಿ ಪ್ರಕೃತಿ ವಿಕೋಪದ ಮಳೆ,ಗಾಳಿಯ ಹೊಡೆತಕ್ಕೆ ಮನೆಯ ಪಕ್ಕದಲ್ಲಿ ಇರುವ ಬೃಹದಾಕಾರದ
ಆಲದ ಮರವು ಮನೆಯ ಮೇಲೆ ಮುರಿದು ಬಿದ್ದ ಹಿನ್ನೆಲೆಯಲ್ಲಿ ಮನೆಯು ಸಂಪೂರ್ಣ ಜಖಂಗೊಂಡ ಕಾರಣ ಸುರಪುರ ತಾಲೂಕು ದಂಡಾಧಿಕಾರಿ ಮತ್ತು ತಹಸೀಲ್ದಾರ ಅವರಿಗೆ ಮನವಿ ಮಾಡಿಕೊಂಡಾಗ.
ತಮ್ಮ ಕಾರ್ಯಾಲಯದ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜಖಂಗೊಂಡ ಮನೆಯನ್ನು ಪಂಚನಾಮೆ ಮಾಡಿ ವರದಿಯನ್ನು ಸೂಕ್ತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಕಳಿಸಿರುತ್ತಾರೆ .
ಎರಡು ತಿಂಗಳು ಅವಧಿ ಕಳೆದ ನಂತರ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಂತ್ರಸ್ತಳ ಮನೆಯ ಜಾಗವನ್ನು ಪರಿಶೀಲಿಸಿ ವರದಿಯನ್ನು ಸಿದ್ದಪಡಿಸಿದ ನಂತರ ಸಂತ್ರಸ್ತೆಯು ಪ್ರಕೃತಿ ವಿಕೋಪ ಪರಿಹಾರನಿಧಿಗೆ ಅರ್ಹಳಲ್ಲಾ ಎಂದು ಸಂತ್ರಸ್ತೆಯ ಫೈಲ್ ಅನ್ನು ರದ್ದುಪಡಿಸಿದರಿಂದ
ಪ್ರಕೃತಿ ವಿಕೋಪದಿಂದ ಮನೆಯನ್ನು ಕಳೆದುಕೊಂಡ ಸಂತ್ರಸ್ತೆಯು ದಿಕ್ಕು ತೋಚದೆ ಇದ್ದಾಗ ನೇರವಾಗಿ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ರಾಜಾ ವೆಂಕಪ್ಪ ನಾಯಕ ಅವರ ಮೊರೆ ಹೋಗಿ ಮನೆಯನ್ನು ಕಳೆದುಕೊಂಡ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕು ಹಾಗೂ ಮಳೆ,ಗಾಳಿಯಿಂದ ನನ್ನ ಮನೆಯ ಮೇಲೆ ಆಲದ ಮರ ಬಿದ್ದು ಮನೆಯು ಸಂಪೂರ್ಣವಾಗಿ ಜಖಂಗೊಡಿದ್ದರು ಸುಳ್ಳು ವರದಿಯನ್ನು ಸೃಷ್ಟಿ ಮಾಡಿಕೊಂಡು ಹೋಗಿ ಪ್ರಕೃತಿ ವಿಕೋಪ ಪರಿಹಾರನಿಧಿ ನನಗೆ ಸಿಗದೆ ಇರಲು ಅಧಿಕಾರಿಗಳೇ ನೇರ ಕಾರಣ ಎಂದು ಸಂತ್ರಸ್ತೆ ಅಧಿಕಾರಿಗಳ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದಳು.
*ವರದಿ : ಮೌನೇಶ ಆರ್ ಭೋಯಿ ತಿಂಥಣಿ*