ವಿಶ್ವಕಪ್ನಲ್ಲಿ ಆಡುವ ಮಹದಾಸೆ ಹೊಂದಿದ್ದ ಶಿಖರ್ ಹಲವು ಸಂದರ್ಶನಗಳಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು. ಭಾರತ ತಂಡದಿಂದ ಹೊರಬಿದ್ದರೂ ಮರಳಿ ಸೇರುವ ಯತ್ನ ನಡೆಸುತ್ತಿದ್ದರು. ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸಬರಿಗೆ ಮಣೆ ಹಾಕಿದ್ದು, ಹಿರಿಯ ಆಟಗಾರನಿಗೆ ಸ್ಥಾನ ನಿರಾಕರಿಸಲಾಗಿದೆ. ಆದಾಗ್ಯೂ, ಗಬ್ಬರ್ಸಿಂಗ್ ವಿಶ್ವಕಪ್ಗೆ ಆಯ್ಕೆಯಾಗಿರುವ ತಂಡವನ್ನು ಅಭಿನಂದಿಸಿದ್ದು, ತಂಡ ಪ್ರಶಸ್ತಿ ಗೆದ್ದು ಬರಲಿ ಎಂದು ಶುಭ ಕೋರಿದ್ದಾರೆ.