*ಕಲಬುರ್ಗಿ*
ಮಾನವಿತೆ ಮೆರೆದ ಕಲಬುರ್ಗಿ ಸಂಸದರಾದ ಡಾ. ಉಮೇಶ್ ಜಾದವ್
ಅಂಬಿಕಾ ತಂದೆ ಬಸವರಾಜ ಕಡಗಂಚಿ . ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಿರೋಳ.ಗ್ರಾಮ
PUC ಯಲ್ಲಿ ಓದುತ್ತಿರುವ ಅಂಬಿಕಾ ವಯಸ್ಸು 18 ಈ ಬಾಲಕಿಗೆ ಎದೆ ನೋವು ಬಾಲಕಿಯ ತಂದೆ ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾರೆ
ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿ ನಂತರ ಎದೆ ನೋವಿನ ಸಂಬಂಧಪಟ್ಟಂತೆ ಎಲ್ಲಾ ಟೆಸ್ಟ್ ರಿಪೋರ್ಟ್ ಬಂದ ನಂತರ
ಕುಟುಂಬದವರೊಂದಿಗೆ ಚರ್ಚೆ ಮಾಡಿ ನಿಮ್ಮ ಮಗಳಿಗೆ ಎದೆಯ ಹಾರ್ಟ್ ಭಾಗದಲ್ಲಿ ಹೋಲ್ ಇದೆ ಎಂದು ಮಾಹಿತಿ ಕೊಟ್ಟ ನಂತರ
ಆಗ ಬಸವರಾಜ್ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಚರ್ಚೆ ಮಾಡಿ ಹಣ ಎಷ್ಟಾಗುತ್ತೆ ಎಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿಗಳು
ಹಾರ್ಟ್ ಆಪರೇಷನ್ ಮಾಡಬೇಕಾದರೆ ಮಿನಿಮಮ್ 5 ರಿಂದ 6 ಲಕ್ಷ ಬರುತ್ತದೆ ಎಂದು ಹೇಳಿದರು
ಆಗ ಬಸವರಾಜ್ ಸರ್ ನನ್ನ ಕಡೆ ಇಷ್ಟೊಂದು ಹಣ ಇಲ್ಲ ಎಂದು ಹೊಲ ಮನೆ ಮಾರಿದ್ರೂ ಕೂಡ ನನ್ನ ಮಗಳ ಆಪರೇಷನ್ ಮಾಡಕ್ಕಾಗಲ್ಲ
ಅಂಬಿಕಾ ತಂದೆ ಬಸವರಾಜ ನಾನು ಅಂಗವಿಕಲ ಇದ್ದ ಕಾರಣ ನನ್ನ ಕೈಯಿಂದ ಇಷ್ಟೊಂದು ಹಣ ಹೋಂದಿಸುವುದಕ್ಕೆ ಆಗಲ್ಲ
ಅದೇ ಸಂದರ್ಭದಲ್ಲಿ ಗ್ರಾಮದ ಹಿರಿಯರೊಂದಿಗೆ ಚರ್ಚೆ ಮಾಡಿ ಗ್ರಾಮಸ್ಥರು ಕೂಡ ಧೈರ್ಯ ತುಂಬುವಂತ ಕೆಲಸ ಮಾಡಿದರು
ನೀನು ಭಯಪಡಬೇಡ ನಾನು ಇದಕ್ಕೆ ಒಂದು ಸೂಕ್ತವಾದ ದಾರಿಯನ್ನು ಹುಡುಕಿ ಕೊಡುತ್ತೇನೆ ಗ್ರಾಮದ ಫಾರೂಕ್ ಮೀಯಾ ಹೇಳಿದರು
ಅದಾದ ನಂತರ ಇಂದು ಬೆಳಿಗ್ಗೆ ಕಲಬುರ್ಗಿ ನಗರದಲ್ಲಿ ಇರುವ ಡಾ ಉಮೇಶ್ ಜಾದವ್ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ಮಾಡಿದರು
ಆಗ ಕಲಬುರ್ಗಿ ಸಂಸದರಾದ ಡಾ. ಉಮೇಶ್ ಜಾದವ್ ಅವರು ಅಂಬಿಕಾ ಅನ್ನೋ ಬಾಲಕಿಯ ತಮ್ಮ ಹತ್ತಿರ ಕರೆದುಕೊಂಡು ಮಾತನಾಡಿ ಧೈರ್ಯ ತುಂಬುವಂತ ಕೆಲಸ ಮಾಡಿದರು
ನಂತರ ಬೆಂಗಳೂರಿನ ಜಯದೇವ್ ಆಸ್ಪತ್ರೆಗೆ ನೇರವಾಗಿ ಕರೆ ಮಾಡಿ ವಿಷಯ ತಿಳಿಸಿ ಚರ್ಚೆ ಮಾಡಿದರು
ಅದಾದ ಬಳಿಕ ಕುಟುಂಬಸ್ಥರೊಂದಿಗೆ ಮಾತನಾಡಿ ಎಲ್ಲರಿಗೂ ಧೈರ್ತುಂಬಿ ನಿಮ್ಮ ಬೆನ್ನಿಂದೆ ನಾನು ಇರುತ್ತೇನೆ ಹೇಳಿದರು