ಯಾದಗಿರಿ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಗಂಗಾರತಿಯ ಮಹೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಜಗದ್ಗುರು ಭಗವಾನ ವೇದವ್ಯಾಸ ಬ್ತಹ್ಮಶ್ರೀ ಪೀಠದ ಸಂಸ್ಥಾಪಕ ರಾಜುಗುರು ಸ್ವಾಮಿ ಜೀಯವರ ಹಾಗೂ ಕೊಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಕೆ ಮುದ್ನಾಳ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಶಿಯಲ್ಲಿ ಯಾವ ರೀತಿ ಗಂಗಾರತಿ ಕಾರ್ಯಕ್ರಮವು ನಡೆಯುತ್ತದೆಯೋ ಅದೇ ರೀತಿಯಾಗಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಭೀಮಾನದಿಯ ತೀರದಲ್ಲಿ ದಿನಾಂಕ 11 ರಂದು ನಡೆಯುತ್ತದೆ. ಅಭಿಷೇಕ, ಪೂಜಾ, ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮಾಧ್ಯಮ ಹೇಳಿಕೆ ನೀಡುವುದರ ಮೂಲಕ ಕೋರಿದರು.
ಗಂಗಾರತಿಯ ಮಹೋತ್ಸವದ ಕಾರ್ಯಕ್ರಮದ ಕರಪತ್ರಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಶರಣಪ್ಪ ಹದ್ನೂರ್,ಆಂಜನೇಯ ನಾಯ್ಕೋಡಿ,ಮಹಾದೇವಪ್ಪ ಕೋಲಿವಾಡ,ದೇವು,ಈಶ್ವರಪ್ಪ ಇದ್ದರು.
