ಸುರಪುರ : ಕರ್ನಾಟಕ ಜನದರ್ಶನ ವೇದಿಕೆ ಅಧ್ಯಕ್ಷರಾಗಿ ಮೌನೇಶ ಬಂಡೋಳಿ ನೇಮಕ.*
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕರ್ನಾಟಕ ಜನದರ್ಶನ ವೇದಿಕೆ ತಾಲೂಕು ಅಧ್ಯಕ್ಷರನ್ನಾಗಿ ಮೌನೇಶ ನಾಯಕ ಬಂಡೋಳಿ ಅವರನ್ನು ನೇಮಕ ಮಾಡಲಾಗಿದೆ.
ಎಂದು ಕರ್ನಾಟಕ ಜನದರ್ಶನ ವೇದಿಕೆ ಕಲ್ಬುರ್ಗಿ ವಿಭಾಗೀಯ ಅಧ್ಯಕ್ಷ ಭೈರಣ್ಣ ಡಿ ಅಂಬಿಗೇರ್ ಅವರು ಪತ್ರಿಕಾ ಪ್ರಕಟಣೆ ನೀಡಿದರು.
ಕರ್ನಾಟಕ ಜನದರ್ಶನ ವೇದಿಕೆ ಸುರಪುರ ತಾಲೂಕಿನ ನೂತನ ಅಧ್ಯಕ್ಷ ಮೌನೇಶ ನಾಯಕ ಬಂಡೋಳಿ ಅವರನ್ನು ನೂತನವಾಗಿ ಆಯ್ಕೆ ಮಾಡಲಾಗಿದೆ ನಮ್ಮ ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ದರಾಗಬೇಕು, ನಾಡು,ನುಡಿ, ನೆಲ,ಜಲ,ರೈತಪರ ಅನ್ಯಾಯವಾದಾಗ ಬಿದಿಗೀಳಿದು ಹೋರಾಟ ಮಾಡಲು ಮುಂದಾಗಬೇಕು ಮತ್ತು ಕರ್ನಾಟಕ ಜನದರ್ಶನ ವೇದಿಕೆಯನ್ನು ನಮ್ಮ ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೀದರ,ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿಯವರೆಗು ನಮ್ಮ ಕರ್ನಾಟಕ ಜನದರ್ಶನ ವೇದಿಕೆಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸ ಬೇಕು ನಮ್ಮ ಸಂಘಟನೆಯು ಯಾವುದೇ ಜಾತಿ ಭೇದ ,ಭಾವವಿಲ್ಲದೆ ಹಾಗೂ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗದಂತೆ ನೋಡಿಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಜನದರ್ಶನ ವೇದಿಕೆ ನೂತನವಾಗಿ ಸುರಪುರ ತಾಲೂಕು ಅಧ್ಯಕ್ಷ ಮೌನೇಶ ನಾಯಕ ಬಂಡೋಳಿ ಅವರಿಗೆ ನೇಮಕಾತಿ ಆದೇಶಪತ್ರದ ಜೊತೆಗೆ ಅದ್ದೂರಿಯಾಗಿ ಶಾಲು,ಹಾರ ಹಾಕಿ ಸನ್ಮಾನ ಮಾಡಲಾಯಿತು.
ಜನದರ್ಶನ ವೇದಿಕೆ ಕಲ್ಬುರ್ಗಿ ವಿಭಾಗೀಯ ಉಪಾಧ್ಯಕ್ಷ ರವಿ ಆರ್ ಅಂಬಿಗೇರ್, ವಿಭಾಗೀಯ ಕಾರ್ಯದರ್ಶಿ ವೆಂಕೋಬ ದೊರೆ ಇತರರು ಉಪಸ್ಥಿತರಿದ್ದರು.