ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಲ್ಲಿ ಮುಂಜಾನೆಯ ಭಸ್ಮಾರತಿಯನ್ನು ನೆರವೇರಿಸುವ ಮೂಲಕ ಅಕ್ಷಯ್ ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ಅಕ್ಷಯ್ ಜೊತೆ ಅವರ ಸಹೋದರಿ ಹಾಗೂ ಪುತ್ರ ಆರವ್ ಕೂಡ ಉಪಸ್ಥಿತರಿದ್ದರು. ಶಿಖರ್ ಧವನ್ ತಮ್ಮ ಕುಟುಂಬದೊಂದಿಗೆ ಅಕ್ಷಯ್ ಅವರನ್ನು ಜತೆಗೂಡಿದ್ದಾರೆ. ಇವರಿಬ್ಬರು ತಮ್ಮ ಕುಟುಂಬ ಸಮೇತ ಇಂದೋರ್ ವಿಮಾನ ನಿಲ್ದಾಣದಿಂದ ನೇರವಾಗಿ ದೇವಸ್ಥಾನಕ್ಕೆ ಬಂದರು. ಭಸ್ಮ ಆರತಿಯ ನಂತರ ಅವರು ಶ್ರೀ ಮಹಾಕಾಲ್ ಲೋಕವನ್ನು ತಲುಪಿದರು.