ಭಾರತೀಯ ಸಿನಿಮಾಗಳು (Indian Cinema) ದೇಶದಲ್ಲೆಲ್ಲಾ ವಿದೇಶದಲ್ಲೂ ಪ್ರೇಕ್ಷಕರ ಮನಗೆದ್ದಿವೆ. ಅದರಲ್ಲೂ ದಕ್ಷಿಣ ಭಾರತದ ಬಾಹುಬಲಿ (Bahubali), ಕೆಜಿಎಫ್, ಆರ್ಆರ್ಆರ್ (RRR) ಹಾಗೂ ಕಾಂತಾರ ಸಿನಿಮಾಗಳು ವಿದೇಶಿ ಪ್ರವಾಸಿಗರುವನ್ನು ಆಕರ್ಷಿಸಿವೆ.
ಇದೀಗ ದೆಹಲಿಯಲ್ಲಿ ನಡೆದ ಜಿ20ಯಲ್ಲೂ (G20 Summit) ದಕ್ಷಿಣ ಭಾರತದ ಒಂದು ಸಿನಿಮಾ ಸದ್ದು ಮಾಡಿದೆ. ತೆಲುಗು ನಿರ್ದೇಶಕ ರಾಜಮೌಳಿ (Rajamouli) ಅವರ “RRR”ಸಿನಿಮಾದ ಬಗ್ಗೆ ಸ್ವತಃ ಬ್ರೆಜಿಲ್ ಅಧ್ಯಕ್ಷ ಲೂಯಿಸ್ ಲುಲು ಡ ಸಿಲ್ವಾ ಕೂಡ ಮಾತನಾಡಿದ್ದು, ಅಚ್ಚರಿ ಮೂಡಿಸುತ್ತಿದೆ. ಚಿತ್ರತಂಡವು ‘RRR Movie’ಎಂಬ ಅಧಿಕೃತ ಟ್ವಿಟರ್ ಖಾತೆಯಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದೆ.
Thank you President of Brezil, @LulaOfficial for your kind words on #RRRMovie.
Our entire team is elated with your applause ❤️. pic.twitter.com/dDpMRtZf23
— RRR Movie (@RRRMovie) September 10, 2023