ಏ.2 ರಂದು ಶ್ರೀ ಯಮನೂರಪ್ಪ ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ / ದನಗಳ ಜಾತ್ರಾ ಮಹೋತ್ಸವ

KTN Admin
1 Min Read

ವರದಿ :: ಬಸವರಾಜ ಕಾರನೂರ

ಶಹಾಪುರ :: ತಾಲೂಕಿನ ಸುಕ್ಷೇತ್ರ ಮಹಲ್‌ರೋಜಾದ ಶ್ರೀ ಯಮನೂರಪ್ಪ ಮುತ್ಯಾ ಅವರ 17 ನೇ ವರ್ಷದ ಜಾತ್ರಾ ಮಹೋತ್ಸವವು ಏಪ್ರೀಲ್ 2 ರಂದು ಅದ್ದೂರಿಯಾಗಿ ಜರುಗಲಿದ್ದು ಸದ್ಬಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಪೂಜ್ಯ ಮಲ್ಲಿಕಾರ್ಜುನ ಅಪ್ಪಾಜಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಗೆ ತಿಳಿಸಿರುವ ಅವರು ದಿ.2 ಮಂಗಳವಾರ ಬೆಳಗ್ಗೆ 9 ಗಂಟೆಗೆ ಕುಂಭ ಕಳಸ, ವಾದ್ಯ, ವೈಭವದೊಂದಿಗೆ ಗಂಗಾಸ್ನಾನ, ಬಳಿಕ ಗಂಧ ಕಾರ್ಯಕ್ರಮ ಜರುಗುವುದು. ಅಂದಿನ ರಾತ್ರಿ ಡೊಳ್ಳಿನ ಪದ, ಗೀಗಿ ಪದಗಳು ಬೆಳಗಿನ ಜಾವದವರಿಗೆ ನೆರವೇರುವವು. ದಿ.3 ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ಗುಂಡು, ಚೀಲ, ಸಂಗ್ರಹಣೆ, ಕಲ್ಲು ಎತ್ತುವ ಕಾರ್ಯಕ್ರಮ ನಂತರ 3 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಕುಸ್ತಿ ಪಂದ್ಯ ಜರುಗುವುದು. ಸಾಯಂಕಾಲ 6 ರ ನಂತರ ಬೆಳಗಿನ ಜಾವದವರಿಗೆ ದೀಪೋತ್ಸವ ಕಾರ್ಯಕ್ರಮ ನೇರವೇರುವುದು.

ದಿನಾಂಕ 4 ರಂದು ಗುರುವಾರ ದನಗಳ ಜಾತ್ರೆ ಜರುಗುವುದು. ಜಾತ್ರೆಗೆ ಬಂದಂತಹ ದನಗಳಿಗೆ ಮೇವಿನ ವ್ಯವಸ್ಥೆ ಹಾಗೂ ಜಾತ್ರೆ ಮುಗಿಯವರೆಗೆ ಬಂದAತಹ ಭಕ್ತಾಧಿಗಳಿಗೆ ಮಹಾಪ್ರಸಾದ , ನೀರಿನ ವ್ಯವಸ್ಥೆ ಇರುತ್ತದೆ. ಐದು ದಿನಗಳ ವರೆಗೆ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ರಾಜಕೀಯ ಮುಖಂಡರು, ಗಣ್ಯರು, ಪಾಲ್ಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದ್ದಾರೆ.

ಸಾಮೂಹಿಕ ವಿವಾಹಕ್ಕೆ ನೋಂದಣಿ ಆರಂಭ
ಶ್ರೀ ಯಮನೂರಪ್ಪ ಅವರ ಜಾತ್ರ ಮಹೋತ್ಸವ ಹಿನ್ನಲೇ ದಿ.2 ರಂದು ನಡೆಯುವ ಸಾಮೂಹಿಕ ವಿವಾಹದಲ್ಲಿ ಮದುವೆ ಮಾಡಿಕೊಳ್ಳಲು ಈಗಾಗಲೇ ನೋಂದಣಿ ಆರಂಭವಾಗಿದ್ದು. ವಧು ಹಾಗÀÆ ವರರ ಭಾವಚಿತ್ರಗಳು, ಜನ್ಮದಾಖಲೆ, ಆಧಾರ್ ಕಾರ್ಡ್, ವರನಿಗೆ 21 ವರ್ಷ ಹಾಗೂ ವಧುವಿಗೆ 18 ವರ್ಷ ಪೂರ್ಣಗೊಂಡಿರುವುದು ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ.ನಂ 9880223693, 9980542569 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ