ಇಂದು ಮಲ್ಲಾ ಬಿ ಗ್ರಾಮದಲ್ಲಿ ಶ್ರೀ ಚಂದಪ್ಪ ಪೂಜಾರಿಯವರ ಬೆನ್ನೆಲುಬುಯಾಗಿರುವ ನಿಂತಿರುವ ಜೋಡೆತ್ತುಗಳ ಕಾರ್ಯ ಶ್ಲಾಘನೆ ಇವಾಗಿನ ಗಣಕ ಯಂತ್ರಗಳು ಸುಮಾರು ಒಂದು ಎಕರೆ ಜಮೀನನ್ನು ಸುಮಾರು 3 ತಾಸು ಹೊಡೆಯುತ್ತಾವೆ ಆದರೆ ಇಲ್ಲಿ ಮಲ್ಲಾ ಬಿ ಗ್ರಾಮದ ಕೀರ್ತಿ ತಂದಿರುವ ಈ ಜೋಡೆತ್ತುಗಳು ಹತ್ತಿ ಬಿತ್ತಿದ ಜಮೀನಿನಲ್ಲಿ ಏಳು ಗಂಟೆಗಳಲ್ಲಿ ಸುಮಾರು ಇಪ್ಪತ್ತು ಎಕರೆ ಗಳೇ ಹೊಡೆದು ಶಹಬ್ಬಾಸ್ ಎನಿಸಿಕೊಂಡಿವೆ ಇಂತಾ ಸಾಧನೆಯನ್ನು ಗುರುತಿಸಿ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಾಗೂ ಸಚಿವರ ಇಂತಾ ಸಾಧನೆ ಮಾಡಿದ ಜಾನುವಾರುಗಳಿಗೆ ಪ್ರೋತ್ಸಾಹಕ್ಕೆ ಮುಂದಾಗಬೇಕೆಂದು ಸಮಾಜ ಸೇವಕ ಶ್ರೀ ಭಾಗೇಶ ಏವೂರ ಮಾತನಾಡಿದರು .
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶ್ರೀ ಶಿವು ದೊರೆ ಶರಣು ದೇವರಮನಿ ಅನಿಲ ಹದನೂರ ಪರಮಾನಂದ ತಳವಾರ ಚಂದಪ್ಪ ಪೂಜಾರಿ ಮರೆಪ್ಪ ಗೌಂಡಿ ಉಪಸ್ಥಿತರಿದ್ದರು .