ಶಹಾಪುರ : ದೇಶಕ್ಕೆ ಭದ್ರ ಬುನಾದಿ ಹಾಕುವ ಶಕ್ತಿ ಇರುವದು ಶಿಕ್ಷಕರಿಗೆ ಮಾತ್ರ ಅಂತಹ ವೃತ್ತಿಯಿಂದ ತಮ್ಮ ಜೀವನ ಸವಿಸಿ ನಿವೃತ್ತಿಯಾಗುವದು ಅಂದೊಂದು ಅವಿಸ್ಮರಣಿಯ ಕ್ಷಣ ಎಂದು ಎಸ್ ಡಿಎಮ್ ಸಿ ಅಧ್ಯಕ್ಷ ಮಹೇಶ ಹುಜರತ್ತಿ ಹೇಳಿದರು .
ಸಮೀಪದ ಯಾಳಗಿ ಗ್ರಾಮದ ನಮ್ಮೂರ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಸತತ ೧೭ ವರ್ಷ ಸೇವೆ ಸಲ್ಲಿಸಿದ ಮುಖ್ಯ ಗುರುಗಳಾದ ಬೀರಪ್ಪ ಕಟ್ಟಿಮನಿಯವರ ನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ
ಇಂದಿನ ಯುವ ಪೀಳಿಗೆ ದೇಶಕ್ಕೆ ಆಸ್ತಿಯಾದ್ರೆ ಅದನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದು ಇಂದು ನಮ್ಮ ಶಾಲೆಯಿಂದ ವಯೋನಿವೃತ್ತಿ ಹೊಂದಿದ ಬೀರಪ್ಪ ,ಕಟ್ಟಿಮನಿಯವರು ಸರಳ ಸಜ್ಜನಿಕಯ ವ್ಯಕ್ತಿ ಅವರ ಮುಂದಿನ ನಿವೃತ್ತಿ ಸುಂದರ ಸುಖಮಯವಾಗಿರಲಿ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮದ ಶಿಕ್ಷಣಪ್ರೇಮಿ ಅಬ್ದುಲ್ ಸಿಪಾಯಿ ಗುರುಗಳೆ ಮಕ್ಕಳ ದಾರಿ ದೀಪ ಅದರಂತೆ ಅವರ ಹಾಕಿಕೊಟ್ಟ ಮಾರ್ಗದಿಂದ ಜೀವ ನಮನ ಸುಂದರವಾಗುತ್ತದೆ ಒಬ್ಬ ಶಿಕ್ಷಕ ತಪ್ಪು ಮಾಡಿದ್ರೆ ಹಲವು ಮಕ್ಕಳು ದಾರಿತಪ್ಪುತ್ತಾರೆ ಶಿಕ್ಷಕರು ಮಾತ್ರ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಾರೆ ಅದೇ ನಮ್ಮ ಶಾಲೆಯ ಶಿಕ್ಷಕರು ಕೂಡ ಮಕ್ಕಳ ಶ್ರೇಯೋಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀ ಬಸನಗೌಡ ಹೊಸಮನಿ , ಶ್ರೀ,ಶ್ರೀನಿವಾಸರಡ್ಡಿ ಶ್ರೀ ಮಾಲಿಪಾಟೀಲ,ಮಲ್ಲನಗೌಡ ಮಾಲಿಪಾಟೀಲ,ಬಸನಗೌಡ ಪೋ ಪಾಟೀಲ,ಬಸವರಾಜ ಹೆಳವರ,ಹಣಮಂತ್ರಾಯ ಮಾಣಸೂಣಗಿ,ಶಾಂತಪ್ಪ ಸಾಹು ಗುಗ್ಗರಿ,ಸಿದ್ದರಾಮಯ್ಯ ಜಂಗಿನಮಠ,ಶಿವನಗೌಡ ,ರಾಮನಗೌಡ ಮಲ್ಲು ಸಜ್ಜನ ,ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ,ಶಿಕ್ಷಕಿಯರು,ಹಾಗೂ ವಿಧ್ಯಾರ್ಥಿಗಳು ಗ್ರಾಮಸ್ಥರು ಭಾಗಿಯಾಗಿದ್ದರು .ನಿರೂಪಣೆ ಶಿಲ್ಪಾ ಪ್ರಾಸ್ಥಾವಿಕ ಎಸ್ ಎಮ್ ಪಾಟೀಲ, ವಂದನಾರ್ಪಣೆ ಪರತಪ್ಪ ಪರಗೊಂಡ,ಮಾಡಿದರು