ನಮ್ಮ ಕರ್ನಾಟಕ ಸೇನೆ ಕೆಂಭಾವಿ ಅಧ್ಯಕ್ಷ : ಶರಣು ದೇವರಮನಿ ಆಯ್ಕೆ.

YDL NEWS
1 Min Read

ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಮ್ಮ ಕರ್ನಾಟಕ ಸೇನೆ ಕೆಂಭಾವಿ ಹೋಬಳಿ ಘಟಕ ಅಧ್ಯಕ್ಷರಾಗಿ ಶರಣು ದೇವರಮನಿ ಅವರನ್ನಾ

ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಸಂಚಾಲಕ ಹಾಗೂ ಸುರಪುರ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಪ್ಯಾಪ್ಲಿ ಅವರ ನೇತೃತ್ವದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಮ್ಮ ಕರ್ನಾಟಕ ಸೇನೆ ಪ್ರಧಾನ‌ ಸಂಚಾಲಕ ಭೀಮಣ್ಣ ಶಖಾಪುರ ಅವರು ಮಾತನಾಡುತ್ತಾ ಇಡೀ ರಾಜ್ಯಾದ್ಯಂತ ನಮ್ಮ ಕರ್ನಾಟಕ ಸೇನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಕನ್ನಡದ ಶಿವಾಜಿ ಬಸವರಾಜ ಎಮ್ ಪಡುಕೋಟೆ ಅವರ ನೇತೃತ್ವದಲ್ಲಿ ಪ್ರತಿ ಗ್ರಾಮ,ಹೋಬಳಿ,ತಾಲೂಕು, ಜಿಲ್ಲಾ, ಮಟ್ಟದಲ್ಲಿ ಅತ್ಯಂತ ಯಶಸ್ವಿಯಾಗಿ ಸಂಘಟನೆಯನ್ನು ತಳಮಟ್ಟದಿಂದ ಕಟ್ಟುವಂತ ಕೆಲಸವಾಗುತ್ತಿದೆ.

ನಮ್ಮ ಕರ್ನಾಟಕ ಸೇನೆಯು ಯಾವುದೇ ಪಕ್ಷ ಹಾಗೂ ಯಾವುದೇ ಜಾತಿಗೆ ಸೀಮಿತವಾಗಿರಬಾರದು ಹಾಗೂ ಜಾತ್ಯಾತೀತವಾಗಿ ,ಪಕ್ಷಾತೀತವಾಗಿ ಸೇನೆಯನ್ನು ನಾವು ನೀವು ಕಟ್ಟಿ ಬೆಳೆಸುವುದರ ಜೊತೆಗೆ ನಾಡು,ನುಡಿ,ನೆಲ,ಜಲ,ರೈತಪರ,ವಿದ್ಯಾರ್ಥಿಪರ ಅನ್ಯಾಯವಾದಾಗ ಬೀದಿಗಳಿದು ಹೋರಾಟ ಮಾಡಲು ನಾವೆಲ್ಲರೂ ಸನ್ನದ್ದರಾಗಿರೋಣ ನಮ್ಮ ಕರ್ನಾಟಕ ಸೇನೆಯ ತತ್ವ ಸಿದ್ದಾಂತಗಳಿಗೆ ಬದ್ದರಾಗಿರೋಣ ಎಂದರು.

ಸೇನೆಯ ನೂತನ ಅಧ್ಯಕ್ಷ ದೇವರಮನಿಯವರಿಗೆ ಸೇನೆಯ ಧ್ವಜ ಹಾಗೂ ಶಾಲು ಹಾಕಿ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಸೇನೆಯ ಶಹಾಪುರ ತಾಲೂಕು ಅಧ್ಯಕ್ಷ ಸಿದ್ದು ಪಟ್ಟೇದಾರ್,ಹಣಮಂತ ಯಕ್ತಾಪುರ,ಆನಂದ ಟೈಗರ್, ಭಾಗೇಶ್ ಏವೂರ್,ಅನಿಲ್ ಹದ್ನೂರ್ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ…. ನಬಿರಸೂಲ ಎಮ್ ನದಾಫ್ ಏವೂರ

Share This Article