ಸಮೀಪದ ಏವೂರ ಗ್ರಾಮದ ಪುರಾತನ ಇತಿಹಾಸ ಹೊಂದಿದ ಪ್ರಸಿದ್ದ ದೇವಾಲಯವಾದ ಸಂಗಮೇಶ್ವರ ದೇವಸ್ಥಾನವೂ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡು ಪ್ರವಾಸದ್ದೋಮ ಕ್ಷೇತ್ರವಾಗಿ ದ್ದು ಪುರಾತತ್ವ ಇಲಾಖೆಯಿಂದ ದೇವಸ್ಥಾನದ ಆಭಿವೃದ್ದಿಗಾಗಿ 2 ಕೋಟಿ ಹಣ ಬಿಡುಗಡೆಯಾಗಿ ಟೆಂಡರ ಪ್ರಕ್ರಿಯೆ ಕೂಡ ಪ್ರಾರಂಭವಾದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾಸುಶೀಲಾ ಬಿ ಅವರು ಬೇಟಿ ನೀಡಿ ದೇವಸ್ಥಾನ ಸ್ಥಿತಿಗತಿ ಕಟ್ಟಡಗಳ ಪರಿಶೀಲನೆ ಮಾಡಿದರು ನಂತರ ಆವರಣದಲ್ಲಿರುವ ಪುಸ್ಕರಿಣಿ ಹಾಗೂ ದೇವಸ್ಥಾನ ದ್ವಾರ ಬಾಗಿಲು ಸುತ್ತಮುತ್ತಲಿನ ಪ್ರದೇಶಗಳನ್ನು ವೀಕ್ಷಣೆ ಮಾಡಿ ಇಲ್ಲಿ ಕೈಗೊಳ್ಳಬೇಕಾದ ಶಿಲಶಾಸನ ರಕ್ಷಣೆ, ಪುಷ್ಕರಣಿಗಳ ಉತ್ಕಲನ ದೇವಸ್ಥಾನ ಮೂಲವಿನ್ಯಾಸಕ್ಕೆ ದಕ್ಕೆ ಬರದ ಹಾಗೇ ಅಭಿವೃದ್ಧಿರ್ಯ ಕೈಗೆತ್ತಿಗೊಳ್ಳಲು ಪರಿಶೀಲನೆ ನಡೆಸಿದರು ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಕೂಡ ಹಲವು ಬೇಡಿಕೆಗಳನ್ನು ಸಲ್ಲಿಸಿದರು ದೇವಸ್ಥಾನದ ಗರ್ಭಗುಡಿಯಲ್ಲಿರುವ ಬಸವಣ್ಣನ ಕಂಚಿನ ಮೂರ್ತಿಯನ್ನು ವೀರೋಪಗೊಂಡಿದ್ದು ಅದನ್ನು ಬದಲಾಯಿಸಬೇಕೆಂದು ಹೇಳಿದರು ನಂತರಗ್ರಾಮಕ್ಕೆ ಬಂದ ಜಿಲ್ಲಾಧಿಕಾರಿಗಳಿಗೆ ಗೌರವಿಸಿದರು ಇದೇ ಸಂದರ್ಬದಲ್ಲಿ ಉಮಾಕಾಂತ ಹಳ್ಳಿ ಶಹಾಪೂರ ತಹಸೀಲ್ದಾರ, ಸುರಪುರ ತಹಸೀಲ್ದಾರ ಎ ಕೆ ಸರಕಾವಸ್ ಹಾಗೂ ಕಂದಾಯ ನೀರಿಕ್ಷಕರ ರಾಜೆಸಾಬ ಕಂದಗಲ್ಲ, ಗ್ರಾಮದ ಮುಖಂಡರಾ ಮಲ್ಲನಗೌಡ ಪಾಟೀಲ, ಶಾಂತಗೌಡ ಪಾಟೀಲ, ವೀರರಾಯಪ್ಪರಾಜು ದಣಿ, ಗೊಲ್ಲಾಳಪ್ಪ ಸಾಹು ಅಂಗಡಿ, ಶಾಂತಯ್ಯ ಗುತ್ತೇದಾರ, ಶೇಖಪ್ಪ ಬಡಿ ಗೇರ, ಸುಬಾಷ ದಳಪತಿ, ಬಸನಗೌಡ ದಳಪತಿ ಬಂದೇನವಾಜ್ ಹಾಗೂ ಗ್ರಾಮಸ್ಥರು ಇದ್ದರು,