ದೇಶದ ಚಿತ್ತ ಜೈನಾಪುರದತ್ತ: ರಾಷ್ಟ್ರ ಮಟ್ಟದ ದಿವ್ಯಾಂಗ ಫ್ಯಾಷನ್ ಮತ್ತು ಟ್ಯಾಲೆಂಟ್ ಶೋ ನಲ್ಲಿ ಜೈನಾಪುರ ಯುವ ದಿವ್ಯಾಂಗನ ಸಾಧನೆ. ಯಾದಗಿರಿ: ಥೈಲ್ಯಾಂಡ್ ಬ್ಯಾಂಕಾಕ್ ನಲ್ಲಿ ನಡೆದ ರಾಷ್ಟ್ರಮಟ್ಟದ ದಿವ್ಯಾಂಗ ಫ್ಯಾಷನ್ ಮತ್ತು ಟ್ಯಾಲೆಂಟ್ ಶೋ ನಲ್ಲಿ ಜೈನಾಪುರ ಯುವ ದಿವ್ಯಾಂಗ ಪ್ರಭು ಚಾಮನೂರ ಇವರು ಪ್ರಥಮ ಸ್ಥಾನ ಪಡೆದಿರುವುದರ ಮೂಲಕ ದೇಶದ ಚಿತ್ತ ಜೈನಾಪುರದತ್ತ ನೋಡುವಂತೆ ಮಾಡಿದ್ದಾರೆ. ಜಿನಿಯಸ್ ಅಲ್ಟಿಮಾ ದುಬೈ ಯುಏಈ, ಪೌಲ ನರೂಲ ಅಕ್ಯಾಡೆಮಿ ಬ್ಯಾಂಕಾಕ್ ಥೈಲ್ಯಾಂಡ್ ಡಿಪರೆಂಟಲಿ ಏಬಲ್ಡ್ ಪೆಡರೇಶನ್ ಆಫ್ ಇಮಡಿಯಾ ಮತ್ತು ಮಾಹೇಜ್ ಎಜುಕೇಶನ್ ಸೊಸೈಟಿ ಸಹಯೋಗದೊಂದಿಗೆ ನವೆಂಬರ್ 09 ಬ್ಯಾಂಕಾಕ್ ನಲ್ಲಿ ನಡೆದ ಇಂಟರ್ನ್ಯಾಷನಲ್ ದಿವ್ಯಾಂಗ ಫ್ಯಾಷನ್ ಮತ್ತು ಟ್ಯಾಲೆಂಟ್ ಶೋ ನಲ್ಲಿ ಕರ್ನಾಟಕ ರಾಜ್ಯದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜೈನಾಪುರ ಗ್ರಾಮದ ವಿಕಲಚೇತನರಾದ ಪ್ರಭು ಚಾಮನೂರ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ದಿವ್ಯಾಂಗನಾಗಿದ್ದು ನೋಡಲು ಸುಂದರವಾಗಿ ಕಾಣುವ ಇವರು ಶೋ ನಲ್ಲಿ ಭಾಗವಹಿಸಿ ದೇಶವೆ ಮೆಚ್ಚುವಂತಹ ಸಾಧನೆ ಮಾಡಿ ಪ್ರಥಮ ವಿಜೇತರಾಗಿರುವುದನ್ನು ನೋಡಿ ಜಿಲ್ಲೆಯ ಜನರಿಗೆ ಮಾದರಿ ದಿವ್ಯಾಂಗ ಯುವಕನಾಗಿದ್ದಾರೆ ದೇಶದ ಎಲ್ಲ ಜನರು ಹುಬ್ಬೇರಿಸುವಂತೆ ಮಾಡಿದ್ದಾರೆ ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ. ಇವರು ಬೆನ್ನುಹುರಿ ಅಪಘಾತ ವಿಶೇಷ ಚೇತನನಾಗಿದ್ದು ಮತ್ತು ಇವರಿಗೆ ಇನ್ನೂ ಹಲವಾರು ಸಮಸ್ಯೆಗಳು ಇದ್ದರು ಕೂಡ ವಿದೇಶಗಳಲ್ಲಿ ಭಾಗವಹಿಸಿ ಇನ್ನುಳಿದ ವಿಕಲಚೇತನರಿಗೆ ಮಾದರಿಯಾಗಿದ್ದಾರೆ. ವಿಕಲಚೇತನನಾದರು ಯಾವುದರಲ್ಲೂ ಹಿಂದಿಲ್ಲ , ಯಾವುದಕ್ಕೂ ಕಡಿಮೆಯಿಲ್ಲ. ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಹಾಗೆಯೆ ಜೈನಾಪುರ ಗ್ರಾಮದ ಗುರು ಹಿರಿಯರು ಸೇರಿ ಈ ಯುವ ದಿವ್ಯಾಂಗನಾದರೂ ಕೂಡ ದೇಶದಲ್ಲಿ ಸಾಧನೆ ಮಾಡಿರುವುದನ್ನು ನೋಡಿ ಜಿಲ್ಲೆಯ ಜನರು ಮತ್ತು ಸಂಘ ಸಂಸ್ಥೆಗಳು ಹಾಗೂ ತಾಲ್ಲೂಕಿನ ಜನರು, ಸಂಘ ಸಂಸ್ಥೆಗಳು ಅಂಗವಿಕಲರ ಸಂಘಗಳು ಅಭಿನಂದನೆ ಸಲ್ಲಿಸಿದ್ದಾರೆ.