ಯಾದಗಿರಿ: ಹುಣಸಗಿ ಪಟ್ಟಣದ. ಹೊರವಲಯದಲ್ಲಿ ಇರುವ ಶ್ರೀ ಹಳ್ಳದ ಹನುಮಾನ ದೇವಸ್ಥಾನದಲ್ಲಿ ಎಂಟನೇ ವರ್ಷದ ಕಾರ್ತಿಕೋತ್ಸವದ ನಿಮಿತ್ಯ ಪಲ್ಲಕ್ಕಿ ಉತ್ಸವ ನೆರವೇರಿಸಲಾಗುವುದು. ಇದೆ ಡಿ 6 ಶುಕ್ರವಾರ ಸಾಯಂಕಾಲ 06:00 ಗಂಟೆಯಿಂದ ಸಂಗೀತ ಹಾಗೂ ಸಾಮೂಹಿಕ ಭಜನೆಯ ಕಾರ್ಯಕ್ರಮ ಹಾಗೂ. ಡಿ. 7 ಶನಿವಾರ ಬೆಳಗ್ಗೆ 05:30 ರಿಂದ ಸಕಲ ವಾದ್ಯ ಮೇಳಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಸೇವೆ, ಅಭಿಷೇಕ, ಮಹಾಮಂಗಳಾರತಿ ಜರುಗುತ್ತದೆ ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಕಮಿಟಿ ಸದಸ್ಯರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಈ ಸಂದರ್ಭದಲ್ಲಿ .ದೇವಸ್ಥಾನದ ಅರ್ಚಕರಾದ . ವೀರಭದ್ರಪ್ಪ. ಹೂಗಾರ . ವೆಂಕಟೇಶ್ ಅರಳಿಗಿಡ . ಮಲ್ಲಯ್ಯ ಸ್ವಾಮಿ . ನಂದಿಕೋಲ .ಪ್ರಕಾಶ ದೇಸಾಯಿ, ಮುತ್ತು ಜಂಬಲದಿನ್ನಿ, ಆನಂದ್ ಬಾರಿಗಿಡದ, ನಂದೂಲಾಲ ಠವಾಣಿ, ನೀಲಕಂಠ ವೈಲಿ, ಸೇರಿ ಭಕ್ತ ಮಂಡಳಿ ಉಪಸ್ಥಿತರಿದ್ದರು.