ಕೆಂಭಾವಿ: ಶಹಾಪುರ ಘಟಕದಿಂದ ಏವೂರ ಗ್ರಾಮದ ಸರಕಾರಿ
ಪ್ರೌಡ ಶಾಲೆಯ ನಿಗದಿತ ಸಮಯಕ್ಕೆ ಬಸ್ ಸಂಚಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಏವೂರು ಗ್ರಾಮಸ್ಥರೆಲ್ಲ ಸೇರಿ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಮೂರು ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಶಾಲಾ ಸಮಯಕ್ಕೆ ಬಸ್ ಬರುವಂತೆ ವಿನಂತಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಬಸ್ ಘಟಕ ವ್ಯವಸ್ಥಾಪಕರಿಗೆಪತ್ರ ಬರೆದು ಬಸ್ ಓಡಿಸುವಂತೆ ಸೂಚಿಸಿದ್ದರು. ಸಚಿವರ ಸೂಚನೆಯಂತೆ ಬಸ್ ಏನು ದಿನಾಲೂ ಓಡಾಡುತ್ತಿದೆ. ಆದರೆ, ಅದು ವಿದ್ಯಾರ್ಥಿಗಳ ಸಮಯಕ್ಕೆ ಬರುತ್ತಿಲ್ಲ ಎಂಬುದೇ ಪಾಲಕರ ಆರೋಪವಾಗಿದೆ. ಈ ವಿಷಯದ ಕುರಿತು ಆನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಇದರಿಂದ ಮಕ್ಕಳ ಕಲಿಕೆ ಪ್ರಮಾಣ ಕುಂಠಿತವಾಗುತ್ತಿದೆ. ಈ ಕೂಡಲೇ ಬಸ್ ಘಟಕ ವ್ಯವಸ್ಥಾಪಕರು ನಮ್ಮ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಸಮಯಕ್ಕೆ ಬಸ್ ಓಡಿಸಲು ಆಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟದ ಹಾದಿ ತುಳಿಯುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಶಂಕರಗೌಡ ಕೊಂಕಲ್ ಎಸ್ ಡಿ ಎಮ್ ಸಿ ಅಧ್ಯಕ್ಷರು ಏವೂರ
ವರದಿ…. ನಬಿರಸೂಲ ಎಮ್ ನದಾಫ್