ಸಿಂದಗಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ್ಲಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ ಎಂದು ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರ ಸಂತಸ ವ್ಯಕ್ತಪಡಿಸಿದ್ದಾರೆ.
ಸುಳ್ಳು, ಭ್ರಷ್ಟಚಾರ ಮತ್ತು ದೇಶವನ್ನು ಒಡೆಯುವ ಕೆಲಸ ಹಳೆಯ ಸರಕಾರದಾಗಿತ್ತು. ಅವರಿಗೆ ದೆಹಲಿ ಜನತೆ ತಕ್ಕ ಉತ್ತರ ನೀಡಿದೆ. ದೆಹಲಿಯ ಸರ್ವತೋಮುಖ ಬೆಳವಣಿಗೆಗೆ ಮತ್ತು ಅಲ್ಲಿನ ಜನರ ಜೀವನವನ್ನು ಉತ್ತೇಜಿಸಲು ನಮ್ಮ ಪಕ್ಷದ ಸರಕಾರ ನಿರಂತರವಾಗಿ ಶ್ರಮಿಸಲಿದೆ ಎಂದು ಶ್ರೀಶೈಲಗೌಡ ಬಿರಾದಾರ ತಿಳಿಸಿದ್ದಾರೆ.