ಮೈಕ್ರೋ ಫೈನಾನ್ಸ್ ಗಳ ಅಕ್ರಮ ಬಡ್ಡಿ ದಂಧೆ ವಿರುದ್ಧ ರಾಜ್ಯಪಾಲರ ಸುಗ್ರೀವಾಜ್ಞೆ ತೀರ್ಪಿಗೆ ಸ್ವಾಗತ

YDL NEWS
1 Min Read

ರಾಜ್ಯದಲ್ಲಿ ಅಕ್ರಮ ಬಡ್ಡಿ ದಂಡೆ ನಡೆಸುತ್ತಿರುವ ಮೈಕ್ರೋ ಫೈನಾನ್ಸ್ ಗಳ ವಿರುದ್ಧ ಈಗಾಗಲೇ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದು ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳಕ್ಕೆ ರಾಜ್ಯದಲ್ಲಿ ಈಗಾಗಲೇ ಸುಮಾರು ಜನ ಆತ್ಮಹತ್ಯೆ ಮಾಡಿಕೊಂಡಿದ್ದು ಸಾಕಷ್ಟು ಜನ ಮನೆ ಊರುಗಳನ್ನು ತೊರೆದು ಪರದಾಡುತ್ತಿದ್ದಾರೆ ಇದಕ್ಕೆಲ್ಲ ಕಾರಣ ಮೈಕ್ರೋ ಫೈನಾನ್ಸ್ ಗಳ ಅಕ್ರಮ ಬಡ್ಡಿ ಕಿರುಕುಳ ತಾಳಲಾರದೆ ಜನ ಗುಳೆ ಹೋಗುತ್ತಿದ್ದಾರೆ ಇದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಸರ್ಕಾರಕ್ಕೆ ದೂರನ್ನು ಸಹಿತ ನೀಡಲಾಗಿತ್ತು ದೂರುಗಳನ್ನು ಆಧರಿಸಿ ಸರ್ಕಾರ ಸುತ್ತೋಲೆಗಳನ್ನು ನಿರ್ಮಿಸಿ ರಾಜ್ಯಪಾಲರ ಅಂಗೀಕಾರಕ್ಕೆ ಕಳುಹಿಸಿಕೊಟ್ಟಿದ್ದರು ಪರಿಸ್ಥಿತಿಯ ಅವಲೋಕನ ಮಾಡಿದ ರಾಜ್ಯಪಾಲರು ಸುಗ್ರೀವಾಜ್ಞೆಗೆ ಅಂಗೀಕಾರ ಹಾಕಿದ್ದಾರೆ ರಾಜ್ಯಪಾಲರ ಅಂಗೀಕಾರಕ್ಕೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯಾಧ್ಯಕ್ಷರಾದ ಚನ್ನಯ್ಯ ವಸ್ತ್ರದವರು ಸ್ವಾಗತ ಕೋರಿದ್ದಾರೆ

Share This Article