ಸುರಪುರ: ಏವೂರ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬಂಜಾರ ಸಮುದಾಯದ ಆರಾಧ್ಯ ದೈವ ಸಂತ 286ನೇ ಜಯಂತಿಯನ್ನು ಸುರಪುರ ತಾಲೂಕಿನ ಏವೂರ ವಿಠ್ಠಲ್ ಚಹ್ಹಣ್ ಅಧ್ಯಕ್ಷರು ಗ್ರಾಮ ಪಂಚಾಯಿತಿ ಏವೂರ ಅವರು ಆಚರಣೆ ಮಾಡಿದರು.
ಇದೆ ವೇಳೆ ಮಾತನಾಡಿದ ಅವರು, ‘ರಾಭೇನಿತೋ ಚಾಬೇನ್ ಮಳೇನಿ’ ಅಂದರೆ ‘ಕೆಲಸ ಮಾಡದಿದ್ದರೆ ತಿನ್ನಲು ಸಿಗುವುದಿಲ್ಲ’ ಎಂಬುದು ಸೇವಾಲಾಲರ ನಾಣ್ಣುಡಿಯಾಗಿದೆ. ಅವರು ಶ್ರಮ ಜೀವಿಗಳು, ಅಲೆಮಾರಿ ಬುಡಕಟ್ಟು ಸಮುದಾಯದ ಶ್ರಮಿಕ, ಬಡ ಕುಟುಂಬದಲ್ಲಿ ಹುಟ್ಟಿದ ಸೇವಾಲಾಲ್ ಅವರ ಕೊಡುಗೆ ಸಮಾಜಕ್ಕೆ ಅಪಾರ ಎಂದರು.
ಇನ್ನು ಸೇವಲಾಲರು ನೋಂದವರ ಕಣ್ಣೀರು ಒರೆಸಿ, ಆತ್ಮಸ್ಥೆರ್ಯ ತುಂಬುತ್ತಿದ್ದರು. ಬಂಜಾರ ಸಮುದಾಯಕ್ಕೆ ಮಾತ್ರ ಸೇವೆ ಮಾಡದೆ ಇತರರಿಗೂ ಸೇವೆ ಸಲ್ಲಿಸುವ ಮಾನವೀಯತೆಯ ನೈಜ ಸೇವಕರಾಗಿದ್ದರು. ಅಲ್ಲದೆ, ಅಪ್ಪಟ ನಾಟಿ ವೈದ್ಯರಾಗಿ, ಅನೇಕರ ಪ್ರಾಣ ರಕ್ಷಣೆ ಮಾಡಿದ್ದಾರೆ ಎಂದು ಹೇಳಿದರು.
ಸೇವಾಲಾಲರು ಕ್ರಿ.ಶ.1739 ಫೆಬ್ರುವರಿ 15ರ ಸೋಮವಾರ ಬೆಳಗ್ಗೆ 9ಕ್ಕೆ ಶಿವರಾತ್ರಿಯ ದಿನ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಬೆಳಗುತ್ತಿಯ ಸೂರಗೊಂಡನ ಕೊಪ್ಪ (ಭಾಯಘಡ)ದಲ್ಲಿ ಜನಿಸಿದ್ದು, ಸರ್ಕಾರದಿಂದ ಪ್ರತಿ ವರ್ಷ ಫೆಬ್ರವರಿ 15ರಂದು ಸಂತ ಸೇವಾಲಾಲರ ಜಯಂತಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು, ಏವೂರ ಗ್ರಾಮ ಪಂಚಾಯತಿ ಕಾರ್ಯಾಲಯದ ಅಧಿಕಾರಿ ವರ್ಗ ಸೇರಿದಂತೆ ಇತರರು ಇದ್ದರು.