ಅಮೆಜಾನ್ ಇಂಡಿಯಾದ ಎಲಿವೇಟ್ ಹರ್ 2025ರಲ್ಲಿ ಮಹಿಳೆಯರಿಗೆ ಸ್ಪೀಡ್ ಮೆಂಟರಿಂಗ್ ಮತ್ತು ವೃತ್ತಿಯ ಅಭಿವೃದ್ಧಿ ಮೂಲಕ ಸಬಲೀಕರಣ ಅಮೆಜಾನ್ ಲೀಡರ್ಸ್ ಮೂಲಕ ಅರ್ಥಪೂರ್ಣ ವೃತ್ತಿಯ ಸಂವಹನಗಳೊಂದಿಗೆ 100ಕ್ಕೂ ಹೆಚ್ಚು ಮಹಿಳಾ ವೃತ್ತಿಪರರಿಗೆ ಸ್ಪೀಡ್-ಮೆಂಟರ್ ಮಾಡಲಾಗಿದೆ
ಬೆಂಗಳೂರು, ಮಾರ್ಚ್ 7, 2025: ಅಂತಾರಾಷ್ಟ್ರೀಯ ಮಹಿಳಾ ದಿನ(ಐಡಬ್ಲ್ಯೂಡಿ) 2025ರ ಅಂಗವಾಗಿ ಅಮೆಜಾನ್ ಇಂಡಿಯಾ `ಅಮೆಜಾನ್ ಎಲಿವೇಟ್ ಹರ್ 2025’ ಸಂಭ್ರಮಿಸುತ್ತಿದ್ದು ಈ ಉಪಕ್ರಮವನ್ನು ಮಹಿಳೆಯರಿಗೆ ಮಾರ್ಗದರ್ಶನ ಮತ್ತು ವೃತ್ತಿ ಅಭಿವೃದ್ಧಿಯ ಅವಕಾಶಗಳ ಮೂಲಕ ಸಬಲೀಕರಿಸಲು ವಿನ್ಯಾಸಗೊಳಿಸಲಾಗಿದೆ. ಈ ವರ್ಷದ ಜಾಗತಿಕ ಐಡಬ್ಲ್ಯೂಡಿ ವಿಷಯ `ಆಕ್ಸಲರೇಟ್ ಆಕ್ಷನ್’ಗೆ ಪೂರಕವಾಗಿ ಈ ಕಾರ್ಯಕ್ರಮವು ಬೆಂಗಳೂರಿನಲ್ಲಿ ನಡೆದಿದ್ದು ಅಮೆಜಾನ್ ನಾಯಕರು ಮತ್ತು ಆಕಾಂಕ್ಷಿ ವೃತ್ತಿಪರರನ್ನು ಮಾರ್ಗದರ್ಶನ, ಸಹಯೋಗ ಮತ್ತು ವೃತ್ತಿಯ ಪ್ರಗತಿಗೆ ಪ್ರಾಯೋಜಕತ್ವದ ಕುರಿತಾದ ಒಳನೋಟಯುಕ್ತ ಚರ್ಚೆಗಳಿಗೆ ಒಗ್ಗೂಡಿಸಿತ್ತು. ಎಲಿವೇಟ್ ಹರ್ 2025 ಲಿಂಗ ಸಮಾನತೆಗೆ ಅಮೆಜಾನ್ ಬದ್ಧತೆಯನ್ನು ಬಿಂಬಿಸುತ್ತಿದೆ ಮತ್ತು ಮಹಿಳೆಯರಿಗೆ ಅವರ ಪೂರ್ಣ ಸಾಮರ್ಥ್ಯ ಕಂಡುಕೊಳ್ಳಲು ಅಗತ್ಯ ಸಾಧನಗಳು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತದೆ.
ಈ ಕಾರ್ಯಕ್ರಮದ ಪ್ರಮುಖಾಂಶವೆಂದರೆ ಸ್ಪೀಡ್ ಮೆಂಟರಿಂಗ್ ಸೆಷನ್, ಇದರಲ್ಲಿ 100ಕ್ಕೂ ಹೆಚ್ಚು ವಿವಿಧ ಹಿನ್ನೆಲೆಗಳ ಮಹಿಳೆಯರು ವೃತ್ತಿಯ ಪ್ರಗತಿ, ನಾಯಕತ್ವ ಅಭಿವೃದ್ಧಿ ಮತ್ತು ವೃತ್ತಿಪರವಾಗಿ ಅಭಿವೃದ್ಧಿ ಹೊಂದಲು ವಿಶ್ವಾಸ ನಿರ್ಮಾಣ ಕುರಿತು ಅಮೆಜಾನ್ ನಾಯಕರೊಂದಿಗೆ ಸಂವಹನಗಳಲ್ಲಿ ತೊಡಗಿಕೊಂಡರು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು “ಮಹಿಳೆಯರ ಏಳಿಗೆಗೆ ಪ್ರಾಯೋಜಕತ್ವ, ಸದೃಢತೆ ಮತ್ತು ಸಬಲೀಕರಣದ ಮಾರ್ಗದರ್ಶಿ ಬೆಳಕು” (ಗೈಡಿಂಗ್ ಲೈಟ್: ಸ್ಪಾನ್ಸರ್ ಶಿಪ್, ರಿಸೈಲೆನ್ಸ್ ಅಂಡ್ ಎಂಪವರಿಂಗ್ ವಿಮೆನ್ ಟು ರೈಸ್) ಎಂಬ ಫೈರ್ ಸೈಡ್ ಚಾಟ್ ನಲ್ಲಿ ಖ್ಯಾತ ನಟಿ ಮತ್ತು ಲೇಖಕಿ ಸೊನಾಲಿ ಬೇಂದ್ರೆ ಮತ್ತು ಅಮೆಜಾನ್ ಇಂಡಿಯಾ, ಜಪಾನ್ ಅಂಡ್ ಎಮರ್ಜಿಂಗ್ ಮಾರ್ಕೆಟ್ಸ್ ಎಚ್.ಆರ್./ಪೀಪಲ್ ಎಕ್ಸ್ಪೀರಿಯೆನ್ಸ್ ಅಂಡ್ ಟೆಕ್ನಾಲಜಿಯ ವಿಪಿ ದೀಪ್ತಿ ವರ್ಮಾ ಭಾಗವಹಿಸಿದ್ದರು.
“ಅಮೆಜಾನ್ ನಲ್ಲಿ ನಾವು ಪ್ರತಿಯೊಬ್ಬರೂ ಏಳಿಗೆ ಸಾಧಿಸುವ ಸಂಸ್ಕೃತಿಯನ್ನು ನಿರ್ಮಿಸುತ್ತಿದ್ದೇವೆ. ನಮ್ಮ ವಿಧಾನವು ಮಾರ್ಗದರ್ಶನದಿಂದ ಮಿತ್ರತ್ವ ಮತ್ತು ಪ್ರಾಯೋಜಕತ್ವಕ್ಕೆ ವಿಕಾಸಗೊಂಡಿದ್ದು ವೃತ್ತಿ ಸುಧಾರಣೆಗೆ ಬೆಂಬಲದ ವ್ಯವಸ್ಥೆ ಸೃಷ್ಟಿಸುತ್ತಿದೆ. ನಮ್ಮ ನಾಯಕರು ಉದ್ಯೋಗಿಗಳಿಗೆ, ಅಸೋಸಿಯೇಟ್ ಗಳಿಗೆ ಮತ್ತು ಪಾಲುದಾರರಿಗೆ ಅಮೆಜಾನ್ ಒಳಗಡೆ ಪ್ರಗತಿ ಸಾಧಿಸಲು ಅಗತ್ಯವಾದ ಉಪಕ್ರಮಗಳನ್ನು ಪ್ರತಿಪಾದಿಸುತ್ತಾರೆ. ಎಲಿವೇಟ್ ಹರ್ 2025 ವೈವಿಧ್ಯಮಯ ಹಿನ್ನೆಲೆಗಳ ಮಹಿಳೆಯರಿಗೆ ಅವರ ಉದ್ಯೋಗದ ಗುರಿಗಳನ್ನು ಸಾಧಿಸಲು ಅಗತ್ಯವಾದ ಕೌಶಲ್ಯಗಳು ಮತ್ತು ಜಾಲವನ್ನು ರೂಪಿಸುತ್ತದೆ ಮತ್ತು ನಾವು ಈ ಆಕಾಂಕ್ಷಿ ವೃತ್ತಿಪರರಿಗೆ ಆಯೋಜಿಸಿರುವ ಸ್ಪೀಡ್ ಮೆಂಟರಿಂಗ್ ಸೆಷನ್ ಗಳ ಅವಕಾಶಕ್ಕೆ ಉತ್ಸುಕರಾಗಿದ್ದೇವೆ” ಎಂದು ಅಮೆಜಾನ್ ಇಂಡಿಯಾ, ಜಪಾನ್ ಮತ್ತು ಎಮರ್ಜಿಂಗ್ ಮಾರ್ಕೆಟ್ಸ್ ಎಚ್.ಆರ್.ಪೀಪಲ್ ಎಕ್ಸ್ಪೀರಿಯೆನ್ಸ್ ಅಂಡ್ ಟೆಕ್ನಾಲಜಿಯ ವಿಪಿ ದೀಪ್ತಿ ವರ್ಮಾ ಹೇಳಿದರು.
“ಉದ್ಯೋಗದ ಸ್ಥಳದಲ್ಲಿ ಮಹಿಳೆಯರ ಸಬಲೀಕರಣವು ಬರೀ ಅವಕಾಶವಲ್ಲ, ಅದು ವಿಶ್ವಾಸ, ನಾಯಕತ್ವ ಮತ್ತು ಪ್ರಗತಿ ಬೆಳೆಯುವ ಪರಿಸರ ಸೃಷ್ಟಿಸುವುದು. ಅಮೆಜಾನ್ ಎಲಿವೇಟ್ ಹರ್ ಭಾಗವಾಗುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದ್ದು ಹಲವಾರು ಪ್ರತಿಭಾವಂತ ಮಹಿಳೆಯರು ಅವರ ವೃತ್ತಿಗಳ ಜವಾಬ್ದಾರಿ ತೆಗೆದುಕೊಳ್ಳುವುದು ಮತ್ತು ಅಡೆತಡೆಗಳನ್ನು ಮುರಿಯುವುದನ್ನು ಕಾಣುವುದು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ” ಎಂದು ನಟಿ ಹಾಗೂ ಲೇಖಕಿ ಸೊನಾಲಿ ಬೇಂದ್ರೆ ಹೇಳಿದರು.
ಎಲಿವೇಟ್ ಹರ್ 2025 ಸ್ಫೂರ್ತಿ ತುಂಬಲು ಮತ್ತು ಸಬಲೀಕರಿಸಲು ವಿನ್ಯಾಸಗೊಳಿಸಲಾದ ಸಕ್ರಿಯ ಕಾರ್ಯಕ್ರಮಗಳ ಸರಣಿ ಹೊಂದಿತ್ತು. “ಆಕ್ಸಲರೇಟಿಂಗ್ ಆಕ್ಷನ್: ಬಿಲ್ಡಿಂಗ್ ರಿಸೈಲೆಂಟ್ ಕೆರೀರ್ಸ್” ಎಂಬ ಚಿಂತನೆಗೆ ಹಚ್ಚುವ ಚರ್ಚೆಯು ಅಮೆಜಾನ್ ನಾಯಕರಾದ ಅಮೆಜಾನ್ ಇಂಡಿಯಾದ ಸಾಫ್ಟ್ ವೇರ್ ಡೆವಲಪ್ಮೆಂಟ್ ನಿರ್ದೇಶಕಿ ಗೀತಾಂಜಲಿ ಭುತಾನಿ; ಅಮೆಜಾನ್ ಇಂಡಿಯಾದ ಕನ್ಸೂಮರ್ ಎಲೆಕ್ಟ್ರಾನಿಕ್ಸ್ ನಿರ್ದೇಶಕಿ ಝೆಬಾ ಖಾನ್, ಅಮೆಜಾನ್ ಟ್ಯಾಲೆಂಟ್ ಅಕ್ವಿಸಿಷನ್ ನಿರ್ದೇಶಕ ರಾಜೀವ್ ಶರ್ಮಾ ಅವರನ್ನು ಒಗ್ಗೂಡಿಸಿತು, ಕಾರ್ಯಕ್ರಮದ ನಿರ್ವಹಣೆಯನ್ನು ಅಮೆಜಾನ್ ಪೇ ನಿರ್ದೇಶಕಿ ನೇಹಾ ಗುಪ್ತಾ ಮಹಾತ್ಮೆ ಮಾಡಿದರು. ಈ ತಜ್ಞರು ಮಹಿಳೆಯೆ ವೃತ್ತಿಪರ ಪ್ರಗತಿಗೆ ಅಗತ್ಯವಾದ ಕ್ರಿಯಾತ್ಮಕ ಕಾರ್ಯತಂತ್ರಗಳು ಮತ್ತು ಎಲ್ಲರನ್ನೂ ಒಳಗೊಳ್ಳುವ ಉದ್ಯೋಗದ ಸ್ಥಳದ ರೂಢಿಗಳನ್ನು ಹೆಚ್ಚಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡ ಆಸ್ಥಾ ಪಂತ್, “ಅಮೆಜಾನ್ ಎಲಿವೇಟ್ ಹರ್ 2025ರಲ್ಲಿ ಭಾಗವಹಿಸುವುದು ನಿಜಕ್ಕೂ ಮೌಲ್ಯಯುತ ಅನುಭವವಾಗಿದೆ. ಹಿರಿಯ ನಾಯಕರಿಂದ ನಾನು ಪಡೆದ ಒಳನೋಟಗಳು ನನಗೆ ಉದ್ಯೋಗದ ಸ್ಥಳದ ಸವಾಲುಗಳನ್ನು ಎದುರಿಸಲು ಮತ್ತು ವೃತ್ತಿಯ ಪ್ರಗತಿಗೆ ಪ್ರಾಯೋಗಿಕ ಕಾರ್ಯತಂತ್ರಗಳನ್ನು ಒದಗಿಸಿತು. ಮಾರ್ಗದರ್ಶನ ಕಾರ್ಯಕ್ರಮವು ಬರೀ ಸಲಹೆಗಿಂತ ಹೆಚ್ಚಿನದಾಗಿತ್ತು- ಅದು ನನಗೆ ನನ್ನ ವೃತ್ತಿಪರ ಗುರಿಗಳನ್ನು ಮರು ಮೌಲ್ಯಮಾಪನ ಮಾಡಿಕೊಳ್ಳಲು, ಸ್ಪಷ್ಟ ಉದ್ದೇಶಗಳನ್ನು ನಿಗದಿಪಡಿಸಿಕೊಳ್ಳಲು ಮತ್ತು ಹೆಚ್ಚಿನ ವಿಶ್ವಾಸದಿಂದ ನನ್ನ ವೃತ್ತಿಯನ್ನು ನಿರ್ವಹಿಸಲು ಉತ್ತೇಜಿಸಿತು. ಈ ಉಪಕ್ರಮದ ಭಾಗವಾಗುವ ಅವಕಾಶ ದೊರೆತಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ” ಎಂದರು.
ಎಲಿವೇಟ್ ಹರ್ 2025 ಅಮೆಜಾನ್ ಇಂಡಿಯಾದ ಎಲ್ಲರನ್ನೂ ಒಳಗೊಳ್ಳುವ ಉದ್ಯೋಗದ ಸ್ಥಳವಾಗಿಸಲು ಮತ್ತು ಮಹಿಳೆಯರನ್ನು ಎಲ್ಲ ಹಂತಗಳಲ್ಲಿ ಸಬಲೀಕರಿಸಲು ಪ್ರಸ್ತುತದ ಬದ್ಧತೆಯ ಒಂದು ಮುಖವಾಗಿದೆ. ಕಂಪನಿಯು ಮಹಿಳೆಯರ ಪ್ರಗತಿ, ನಾಯಕತ್ವ ಸಾಮರ್ಥ್ಯಗಳು ಮತ್ತು ವೃತ್ತಿ ಸುಧಾರಣೆಗೆ ಬೆಂಬಲಿಸಲು ಅಗತ್ಯವಾದ ಸಮಗ್ರ ಮಾರ್ಗದರ್ಶನ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಈ ಉಪಕ್ರಮಗಳನ್ನು ಭವಿಷ್ಯದ ಮಹಿಳಾ ನಾಯಕರಿಗೆ ಸದೃಢ ಮಾರ್ಗ ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ.
ಮಹಿಳಾ ಉದ್ಯೋಗಿಗಳಿಗೆ ಅಮೆಜಾನ್ ಕಾರ್ಯಕ್ರಮಗಳು:
ಕೆಟಾಪುಲ್ಟ್: ಹಾರ್ವಡ್ ಬಿಸಿನೆಸ್ ಪಬ್ಲಿಷಿಂಗ್ ಕಾರ್ಪೊರೇಟ್ ಲರ್ನಿಂಗ್ ಸಹಯೋಗದಲ್ಲಿ ಈ ಕಾರ್ಯಕ್ರಮವು ಮಧ್ಯಮ ಹಂತದ ಮಹಿಳಾ ಮ್ಯಾನೇಜರ್ ಗಳಿಗೆ ನಾಯಕತ್ವ ಸ್ಥಾನಗಳಲ್ಲಿ ಕೌಶಲ್ಯಗಳು ಮತ್ತು ಜ್ಞಾನದೊಂದಿಗೆ ಸಬಲೀಕರಿಸುತ್ತದೆ.
ವಿಮೆನ್ ಇನ್ ಲೀಡರ್ ಶಿಪ್ ಪ್ರೋಗ್ರಾಮ್ (ಡಬ್ಲ್ಯೂ.ಎಲ್.ಪಿ.): ಮಧ್ಯಮ ಮ್ಯಾನೇಜ್ಮೆಂಟ್ ಹುದ್ದೆಗಳಲ್ಲಿರುವ ಮಹಿಳೆಯರಿಗೆ ಬೆಂಬಲಿಸಲು ರೂಪಿಸಲಾಗಿದ್ದು ಅವರಿಗೆ ನಾಯಕತ್ವದ ಧ್ವನಿ ತೀಕ್ಷ್ಣಗೊಳಿಸಲು, ಅವರ ವೃತ್ತಿಪರ ಜಾಲವನ್ನು ಸದೃಢಗೊಳಿಸಲು ಮತ್ತು ವಿಸ್ತಾರ ಎಂಟರ್ಪ್ರೈಸ್ ಮನಸ್ಥಿತಿ ಅಭಿವೃದ್ಧಿಪಡಿಸಲು ನೆರವಾಗುತ್ತದೆ.
ಆಸ್ಕ್ ಮಿ ಎನಿಥಿಂಗ್: ಹೊಸ ಮಹಿಳಾ ನಾಯಕಿಯರಿಗೆ ಹಿರಿಯ ಮಹಿಳಾ ನಾಯಕಿಯರಿಂದ ನೇರ ಭೇಟಿಯ ಮೂಲಕ ಮಾರ್ಗದರ್ಶನ ಮತ್ತು ಜ್ಞಾನ ಹಂಚಿಕೆಯ ಮೂಲಕ ಮಾರ್ಗದರ್ಶನ ಪಡೆಯುವ ಅವಕಾಶ ಕಲ್ಪಿಸುತ್ತದೆ.
ಲಿಸನಿಂಗ್ ಸರ್ಕಲ್ಸ್: ಮಹಿಳಾ ಉದ್ಯೋಗಿಗಳಿಗೆ ಸುರಕ್ಷಿತ ಸ್ಥಳವನ್ನು ಸೃಷ್ಟಿಸಿ ಅವರನ್ನು ನಾಯಕರೊಂದಿಗೆ ಮುಕ್ತ ಸಂವಹನಗಳಿಗೆ ಅವಕಾಶ ಕಲ್ಪಿಸಿ, ಸಮುದಾಯದ ಭಾವನೆ ಮೂಡಿಸುತ್ತದೆ ಮತ್ತು ಮೌಲ್ಯಯುತ ಫೀಡ್ ಬ್ಯಾಕ್ ನೀಡುತ್ತದೆ.
ಅಮೆಜಾನ್ ಕೆಟಲಿಸ್ಟ್ ಪ್ರೋಗ್ರಾಮ್: ಅಮೆಜಾನ್ ಮಹಿಳಾ ನಾಯಕಿಯರಿಗೆ ಅವರ ಜ್ಞಾನ, ಅನುಭವ ಮತ್ತು ಕಲಿಕೆಗಳನ್ನು ಬಳಸಿ ಅಭಿವೃದ್ಧಿ ಹೊಂದುವ ಮತ್ತು ಹಿರಿಯ ಅಮೆಜಾನ್ ನಾಯಕರೊಂದಿಗೆ 1:1 ಮಾರ್ಗದರ್ಶನದ ಮೂಲಕ ಅವರ ಪ್ರಗತಿ ಮತ್ತು ವೃತ್ತಿಯ ಪ್ರಗತಿಯ
ಉಪಕ್ರಮ
ವಿಮೆನ್ ಇನ್ ಲೀಡರ್ ಶಿಪ್ (ಡಬ್ಲ್ಯೂಐಎಲ್): ಡಬ್ಲ್ಯೂಐಎಲ್ ಮಹಿಳೆಯರಿಗೆ ವೃತ್ತಿಯ ಆಧಾರಗಳು, ಸ್ವಯಂ ಮಿತಿಗೊಳಿಸುವ ಪೂರ್ವಾಗ್ರಹಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುವ ತಲ್ಲೀನಗೊಳಿಸುವ ಅಭಿವೃದ್ಧಿ ಕಾರ್ಯಕ್ರಮ ಮತ್ತು ನೆಟ್ವರ್ಕಿಂಗ್, ಬ್ರಾಂಡಿಂಗ್ ಮತ್ತು ಪ್ರಾಯೋಜಕತ್ವದ ಕಾರ್ಯ ವಿಧಾನಗಳನ್ನು ಅಳವಡಿಸುವುದು.
`ಸ್ಪಾನ್ಸರ್ ಫಾರ್ ಸಕ್ಸಸ್’: ಇತ್ತೀಚೆಗೆ ಪ್ರಾಯೋಗಿಕವಾಗಿ ನಡೆಸಿದ ಕಾರ್ಯಕ್ರಮ, ಇದು ಉನ್ನತ ಕಾರ್ಯಕ್ಷಮತೆ, ಕಡಿಮೆ ಪ್ರಾತಿನಿಧ್ಯದ ಪ್ರತಿಭೆಯನ್ನು ಬಿಟ್ಟುಬಿಡುವ ಹಂತದಲ್ಲಿರುವವರನ್ನು ಪ್ರಾಯಜಕರು ಎಂದು ಹೊಂದಿಸುತ್ತದೆ. ಪ್ರಾಯೋಜಕರು ನಾಯಕತ್ವ ಸರಣಿಯಲ್ಲಿ ವಕ್ತಾರರಾಗಿ ಮತ್ತು ವಿಸ್ತಾರ ಜಾಲಕ್ಕೆ ಕನೆಕ್ಟರ್ ಗಳಾಗಿ ಕೆಲಸ ಮಾಡುತ್ತಾರೆ. ಅವರು ಬಡ್ತಿಗಳನ್ನು ನೀಡಲು, ಕೌಶಲ್ಯಗಳನ್ನು ಸದೃಢಗೊಳಿಸಿಕೊಳ್ಳಲು ಮತ್ತು ಪ್ರತಿಭೆಗೆ ಪ್ರಮುಖ ಅನುಭವಗಳನ್ನು ಸನ್ನದ್ಧಗೊಳಿಸಲು ನೆರವಾಗುತ್ತಾರೆ.
ವಿದ್ಯಾರ್ಥಿನಿಯರು, ವೃತ್ತಿಪರರು ಮತ್ತು ಸಮುದಾಯಕ್ಕೆ ಅಮೆಜಾನ್ ಕಾರ್ಯಕ್ರಮಗಳು:
ಅಮೆಜಾನ್ ವಾವ್: ಈ ಕಾರ್ಯಕ್ರಮವನ್ನು ಮಹಿಳೆಯರಿಗೆ ತಂತ್ರಜ್ಞಾನ ಮತ್ತಿತರೆ ವೃತ್ತಿಗಳಲ್ಲಿ ಉದ್ಯೋಗಕ್ಕೆ ಸನ್ನದ್ಧತೆಯ ಬೆಂಬಲಕ್ಕೆ ವಿನ್ಯಾಸಗೊಳಿಸಲಾಗಿದೆ. ವಾವ್ ಮಹಿಳೆಯರಿಗೆ ಅವರ ಜಾಲ ವಿಸ್ತರಿಸಲು, ವಿವಿಧ ವೃತ್ತಿಯ ಮಾರ್ಗಗಳನ್ನು ಕಲಿಯಲು ಮತ್ತು ಅವರ ನಾಯಕತ್ವ ಕೌಶಲ್ಯಗಳನ್ನು ನಿರ್ಮಿಸಿಕೊಳ್ಳಲು ನೆರವಾಗುತ್ತದೆ.
ಅಮೇಜ್ WIT (ವಿಮೆನ್ ಇನ್ ಟೆಕ್ನಾಲಜಿ): ತಂತ್ರಜ್ಞಾನ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ನೆಟ್ವರ್ಕಿಂಗ್ ಮತ್ತು ಕಲಿಕೆಯ ಕಾರ್ಯಕ್ರಮವಾಗಿದ್ದು ಅದು ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿಯಾಗಲು ಸಂಪರ್ಕ, ಸಕ್ರಿಯತೆ, ಶಿಕ್ಷಣ ಮತ್ತು ಸನ್ನದ್ಧತೆಗೆ ನೆರವಾಗುತ್ತದೆ.
ಅಮೆಜಾನ್ ಸಹೇಲಿ: ದೇಶಾದ್ಯಂತ ಮಹಿಳಾ ಉದ್ಯಮಿಗಳಿಗೆ ಅಮೆಜಾನ್.ಇನ್ ನಲ್ಲಿ ಅವರ ಉತ್ಪನ್ನಗಳನ್ನು ಮಾರಾಟ ಮಾಡಲು ವೇದಿಕೆ ಸೃಷ್ಟಿಸಿಕೊಡುವ ಮೂಲಕ ಅವರಿಗೆ ಆರ್ಥಿಕ ಸ್ವಾತಂತ್ರ್ಯ ಮತ್ತು ಪ್ರಗತಿಗೆ ಬೆಂಬಲಿಸುತ್ತದೆ.
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್ ಶಿಪ್ (ಎ.ಎಫ್.ಇ): ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ಪಡೆಯಲು ಆದ್ಯತೆ ನೀಡುವ ಬಾಲ್ಯದಿಂದ ವೃತ್ತಿಯವರೆಗೆ ಇರುವ ಕಾರ್ಯಕ್ರಮವಾಗಿದ್ದು ಇದು ಮಹಿಳೆಯರಿಗೆ ತಂತ್ರಜ್ಞಾನ ಉದ್ಯೋಗಗಳಿಗೆ ಶಿಷ್ಯವೇತನಗಳು ಮತ್ತು ಇಂಟರ್ನ್ ಶಿಪ್ ಮೂಲಕ ಬೆಂಬಲಿಸುತ್ತದೆ.
About Amazon.in
The Amazon.in marketplace is operated by Amazon Seller Services Private Limited, an affiliate of Amazon.com, Inc. (NASDAQ:
AMZN). Amazon.in seeks to build the most customer-centric online destination for customers to find and discover virtually
anything they want to buy online by giving them more of what they want –vast selection, fast and reliable delivery, and a
trusted and convenient experience; and provide sellers with a world-class e-commerce marketplace.