ನಂದವಾಡಗಿ ಏತ ನೀರಾವರಿ ಕಾಮಗಾರಿ ವಿಳಂಬ ಕಾಮಗಾರಿ ಶೀಘ್ರ ವಾಗಿ ಪೂರ್ಣ ಗೊಳಿಸುವದಾಗಿ ಕರಿಯಪ್ಪ ವಜ್ಜಲ್ ಲಿಂಗಸುಗೂರು ವರದಿ.

YDL NEWS
2 Min Read

ಲಿಂಗಸುಗೂರು :ನಂದವಾಡಿಗೆ ಏತನೀರಾವರಿ ಹೋರಾಟ ಹಾಗೂ ರೈತ ಸಭೆಯಲ್ಲಿ ಗುತ್ತಿಗೆದಾರರಾದ ಕರಿಯಪ್ಪ ವಜ್ಜಲ್ (ಎನ.ಡಿ ವಡ್ಡರ್) ಮಾತನಾಡಿ ಭಾಗದಲ್ಲಿ ನಮಗೆ ಕೆಲ ರೈತರಿಂದ ಕಾಮಗಾರಿ ವಿಳಂಭ ವಾಗಿದೆ . ಜಮೀನು ಅವಾರ್ಡ ಆಗಿದ್ದರೂ ಹೆಚ್ಚಿನ ಮೊತ್ತ ಪರಿಹಾರ ಕೊಡಿಸಲು ಕೇಳುತ್ತಿದ್ದಾರೆ. ಇದು ಸರಕಾರದ ಮಟ್ಟದಲ್ಲಿ ನಿರ್ಧಾರವಾಗ ಬೇಕು, ಕೆಲವೆಡೆ ರೈತರು ತಮಗೆ ಬರುವ ಹಣ ಪಡೆಯಲು ಮುಂದೆ ಬರುತ್ತಿಲ್ಲ ಇದರಿಂದ ಕೆಲಭಾಗದಲ್ಲಿ ಮಾತ್ರ ಕಾಮಗಾರಿ ವಿಳಂಭವಾಗಿದೆ. ಇನ್ನೂ ಮುಂದಿನ 6 ತಿಂಗಳನಲ್ಲಿ ಪೂರ್ಣಗೂಳಿಸಲಾಗುವದು ಎಂದು ಹೇಳಿದರು.

ಕಳೆದೆರಡು ದಿನಗಳಿಂದ ನಂದವಾಡಗಿ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಾಹುಕಾರ ನೇತೃತ್ವದಲ್ಲಿ ರೈತರು ಯೋಜನಾ ಪ್ರದೇಶದ ಭೇಟಿ ನೀಡಿ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಹರಿಸುವಂತೆ ಯೋಜನಾ ಪ್ರದೇಶದ ಕಾಮಗಾರಿ ವೀಕ್ಷಣೆ ನಡೆಸಿ ಕೆಬಿಜೆಎನ್‌ಎಲ್ ಹಾಗೂ ಗುತ್ತಿಗೆದಾರರ ಒತ್ತಡ ಹಾಕುತ್ತಿದ್ದಾರೆ.

ಕಸಬಾ ಲಿಂಗಸಗೂರುನಲ್ಲಿ ಜರುಗಿದ ಸಭೆಯಲ್ಲಿ ಸಂತೆಕೆಲ್ಲೂರು, ಮಟ್ಟೂರು, ಸರ್ಜಾಪೂರ, ಗೆಜ್ಜಲಗಟ್ಟಾ, ಅಂಕುಶದೊಡ್ಡಿ ಸೇರಿ ನಾನಾ ಗ್ರಾಮ ಪಂಚಾಯಿತಿಗಳ ನೂರಾರು ರೈತ ಮುಖಂಡರು ಕಾಮಗಾರಿ ವಿವರವಾದ ಮಾಹಿತಿ ಪಡೆಯಲು ಭಾಗವಹಿಸಿದರು.

ಹೋರಾಟ ಸಮಿತಿ ತಾಂತ್ರಿಕ ಸಮಿತಿ ಅಧ್ಯಕ್ಷ ಶರಣಗೌಡ ಬಸಾಪೂರ ಮತ್ತು ಕಾರ್ಯದರ್ಶಿ ರಮೇಶ ಶಾಸ್ತಿ ಮಾತನಾಡಿ ಈಗಾಗಲೇ ಸರಕಾರ ನೀರಿನ ಹಂಚಿಕೆ ಮಾಡಿ ಹಣ ಕೂಡಾ ಬಿಡುಗಡೆಯಾಗಿದೆ. ತೊಂಡಿಹಾಳದಿಂದ ನಂದವಾಡಗಿವರೆಗೆ ಮುಖ್ಯ ಪೈಪಲೈನ್ (ರೈಸಿಂಗ್‌ಮೇನ್) ಕಾಮಗಾರಿ ಮತ್ತು ಪಂಪ್‌ಹೌಸ್ ವಿದ್ಯುತ್ ಕಾಮಗಾರಿ ಎಲ್& ಟಿ ಕಂಪನಿ ಪೂರ್ಣಗೋಳಿಸಿದೆ. ಪ್ರಥಮ ಹಂತದ ಕಾಮಗಾರಿ ಪಡೆದ ಇಸ್ರೇಲ್ ಮೂಲದ ಥಾಲ್ ಮತ್ತು ಶೇ60% ಮಾತ್ರ ಕಾಮಗಾರಿ ಪೂಣಗೊಳಿಸಿದೆ.ಅವರಿಗೆ ಹಾಗೂ ಶೇ 80% ಕಾಮಗಾರಿ ಪೂರ್ಣಗೊಳಿಸಿದ ಎರಡನೇ ಹಂತದ ಗುತ್ತಿಗೆ ಪಡೆದ ಹೈದ್ರಾಬಾದನ ಮೇಘಾ ಕಂಪನಿ ಗುತ್ತೇದಾರರು ಹಾಗೂ ಅಧಿಕಾರಿಗಳಿಗೂ ಮೂರು ತಿಂಗಳ ಬೇಸಿಗೆ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ತಾಕೀತು ಮಾಡಲಾಗಿದೆ ತಮ್ಮ ಕಂಪನಿಯಿಂದ ಬಾಕಿ ಉಳಿದ ಕಾಮಗಾರಿ ಬೇಗ ಪೂರ್ಣಗೊಳಿಸುವಂತೆ ರೈತರ ಪರವಾಗಿ ಮನವಿ ಮಾಡಿದರು.

ಆಗ ಕೆಬಿಜೆಎನ್‌ಎಲ್ ಎಇಇ ಮಲ್ಲಪ್ಪ ಆರು ತಿಂಗಳ ಅವಧಿಯಲ್ಲಿ ಮೂರನೇ ಹಂತದ ಗುತ್ತಿಗೆದಾರರ ಎಲ್ಲಾ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಆಗ ರೈತರು ನೀವು ಪೂರ್ಣಗೊಳಿಸದಿದ್ದರೆ ಗುತ್ತಿಗೆ ಪಡೆದ ಕಂಪನಿ ಮುಂದೆ ಉಪವಾಸ ಸತ್ಯಾಗ್ರಹ ಚಳುವಳಿ ಮಾಡುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಸಿದ್ದರಾಮಪ್ಪ ಸಹುಕಾರ, ಶರಣಗೌಡ ಬಸಾಪೂರ, ಬಸವಂತರಾಯ ಕುರಿ, ಹೆಚ್. ಬಿ.ಮುರಾರಿ ರಮೇಶ ಶಾಸ್ತಿ ಮಲ್ಲೇಶಗೌಡ ಮಟ್ಟೂರು, ಆದನಗೌಡ ಪಾಟೀಲ್, ಗುರುನಾಥರೆಡ್ಡಿ ದೇಸಾಯಿ, ಮಲ್ಲನಗೌಡ ಹಳ್ಳಿ, ರೈತ ಮುಖಂಡರಾದ ಕರಿಬಸನಗೌಡ ಬಸಾಪೂರ, ಚಂದ್ರಶೇಖರಪ್ಪ ವಂದ್ಲಿ, ವಿರುಪಾಕ್ಷಪ್ಪ ಹಂದ್ರಾಳ, ಅಮರಗುಂಡಪ್ಪ ಅರಳಳ್ಳಿ, ಸಿದ್ದನಗೌಡ, ವೆಂಕನಗೌಡ, ದೇವರೆಡ್ಡಿ, ಸಿದ್ರಾಮಪ್ಪ, ಶರಣಪ್ಪ ಸಾಹುಕಾರ, ಶರಣಪ್ಪ ಹೊಳೆಯಾಚಿ, ಶರಣಪ್ಪ ಉಮಲೂಟಿ, ಶೇಖರಯ್ಯ,, ದೇವಪ್ಪ, ಶಿವಕುಮಾರ, ಮಂಜುನಾಥ, ಸಿಂಗ್ ಸೇರಿ ನೂರಾರು ರೈತ ಮುಖಂಡರು ಇಲಾಖೆ ಮತ್ತು ಕಂಪನಿ ಅಧಿಕಾರಿ ವರ್ಗ ಇದ್ದರು.

Share This Article