ಕೆಂಭಾವಿ ಪಟ್ಟಣ ಸಮೀಪದ ಏವೂರ: ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಒಂದು
ತಿಂಗಳುಗಳ ಕಾಲ ನಡೆಯುವ ಉಪವಾಸ ವೃತದ ಹಿನ್ನೆಲೆಯಲ್ಲಿ ಕೆಂಭಾವಿ ಪಟ್ಟಣ ಸಮೀಪದ ಏವೂರ ಜುಮ್ಮ ಮಸೀದಿ ಆವರಣದಲ್ಲಿ ಹಿಂದೂ ಮುಸ್ಲಿಂ ಬಾಂಧವರಿಗಾಗಿ ಇಫ್ತಾರ ಕೂಟವನ್ನ ಆಯೋಜನೆ ಮಾಡಲಾಗಿತ್ತು. ಹಿಂದೂ ಮತ್ತು ಮುಸ್ಲಿಂ ಧರ್ಮದ ಬಾಂಧವರಿಗೆಲ್ಲ ಪ್ರೀತಿಯ ಆತ್ಮೀಯ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಕೆಂಭಾವಿ ಪಟ್ಟಣ ಸಮೀಪದ ಏವೂರ (ಮಲ್ಲನಗೌಡ ಎಸ್ ಪಾಟೀಲ್, ಶರಣಗೌಡ ಕರ್ನಾಳ್, ಶಂಕರಗೌಡ ಕೊಂಕಲ್ ,ಪರಶುರಾಮ್ ಟಣಕೆದಾರ,ಜೆಟ್ಟಪ್ಪ ಹೊಸಮನಿ) ಇಪ್ತಿಯರ್ ಕೂಟ ನಿರ್ವಹಿಸಿದ್ದರು. ಹಿಂದೂ ಮುಸ್ಲಿಂ ಬಾಂಧವರಿಬ್ಬರೂ ಪರಸ್ಪರ ಶುಭ ಕೋರಿ ಒಬ್ಬರಿಗೊಬ್ಬರು ತಿನಿಸುತ್ತಾ ಇಪ್ತಿರ ಕೂಟದಲ್ಲಿ ಭಾಗಿಯಾಗಿ ಭಾವೈಕ್ಯತೆಯನ್ನ ಮೆರೆದರು.ನಂತರ ಮಕ್ಕಾ ಮಸೀದಿ ಪ್ರಾರ್ಥನಾ ಮಂದಿರದಲ್ಲಿ ಮುಸ್ಲಿಂ ಸಮುದಾಯದ ಬಾಂಧವರು ಪ್ರಾರ್ಥನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಏವೂರ ಮುಖಂಡ ಬಂದೇ ನವಾಜ್ ವನದುರ್ಗ, ಅಬ್ದುಲ್ ಘನಿ ಸಂತಿ, ಹಾಜಿಸಾಬ ಗಾಣದ, ಶರೀಫ್ ವಜಲ್ ,ಏವೂರ ಗ್ರಾಮದ ಇತರರು ಇದ್ದರು.ವರದಿ..ನಬಿರಸೂಲ್ ಎಮ್ ನದಾಫ್