ಯಾದಗಿರಿ: ಜಾಲಿಬೆಂಚಿಯಲ್ಲಿ ಶಾರ್ಟ್ ಸರ್ಕ್ಯೂಟ್, ಇಡೀ ಓಣಿಗೆ ವಿದ್ಯುತ್ ಶಾಕ್ -ತತ್ತರಿಸಿದ ಜನ.!

YDL NEWS
1 Min Read

ಜಾಲಿಬೆಂಚಿ: ಭಾರೀ ಬಿರುಗಾಳಿ ಬಿಟ್ಟಿದ್ದರಿಂದ ಶಾರ್ಟ್ ಸರ್ಕ್ಯೂಟ್‌ ಆಗಿ ಇಡೀ ಓಣಿಗೆ ವಿದ್ಯುತ್ ತಗುಲಿ. ಎಲ್ಲೆಂದರಲ್ಲಿ ವಿದ್ಯುತ್ ಕಂಬಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.

ಇಂದು ಸಂಜೆಯಿಂದ ಶುರುವಾದ ಬೃಹತ್ ಗಾತ್ರದ ಬಿರುಗಾಳಿಗೆ ಗ್ರಾಮದ ಮಲ್ಲಿಕಾರ್ಜುನ ದೇಗುಲ ಹತ್ತಿರ ಇರುವ 65ರ (ಟಿಸಿ) ಯಿಂದ ಶಾರ್ಟ್ ಸರ್ಕ್ಯೂಟ್ ಆಗಿ ಕಂಬಗಳಲ್ಲಿ ಅಳವಡಿಸಿದ ವಿದ್ಯುತ್ ತಂತಿಗಳು ಕತ್ತರಿಸಿ ತುಂಡಾಗಿ ಬಿದ್ದಿದ್ದು, ಒಂದು ಕ್ಷಣ ಮನೆಯಲ್ಲಿದ್ದ ಜನರು ಜೀವ ಝಲ್ ಎಂದು ಹೋಗಿದೆ.

ಇನ್ನು 100ಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, ಫ್ರಿಡ್ಜ್, ಪ್ಯಾನ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿದ್ದು, ವಿದ್ಯುತ್‌ ಶಾರ್ಟ್ ಶಬ್ದಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.

ಗ್ರಾಮದ ರಾಯಪ್ಪ ಪಸಲಾದಿ ಹಾಗೂ ರಾಜ ಅಹ್ಮದ್ ಚನ್ನೂರ ಅವರಿಗೆ ವಿದ್ಯುತ್ ತಗುಲಿದ್ದು, ಚಿಕಿತ್ಸೆಗೆಂದು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಅದೃಷ್ಟವಶಾತ್ ಇನ್ನುಳಿದವರುಹೋಗಿದ್ದಾರೆ. ಅದೃಷ್ಟವಶಾತ್ ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸುರಪುರ ತಾಲೂಕಿನಾದ್ಯಂತ ಅನೇಕ ಹಳ್ಳಿಗಳಲ್ಲಿ ಸುಮಾರು 45ಕ್ಕೂ ಹೆಚ್ಚು ವರ್ಷಗಳ ಹಿಂದೆ ಅಳವಡಿಸಿದ ವಿದ್ಯುತ್ ತಂತಿ ಕತ್ತರಿಸಿ ಬಿಳುತ್ತಿವೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಕೊಂಡು ಜಾಲಿಬೆಂಚಿ ಹಾಗೂ ತಾಲೂಕಿನ ಹಳ್ಳಿಗಳಲ್ಲಿ ಇರುವ ಸಮಸ್ಯೆ ಬಗೆ ಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವರದಿ: ಎನ್ ಎಮ್ ನದಾಫ್ ಯಾದಗಿರಿ

Share This Article