ಸಿಂದಗಿ: ದೇಶದೆಲ್ಲೆಡೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿ ಸಂಭ್ರಮಾಚರಣೆಯ ಜೊತೆಗೆ ವೀರ ಯೋಧರಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ಭಾಜಪ ಪಕ್ಷದ ರಾಷ್ಟ್ರೀಯ ಅಧ್ಯಕ್ಷ J.P.Naddaರವರು ದೇಶವ್ಯಾಪಿ ತಿರಂಗಾ ಯಾತ್ರೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ , ರಾಜ್ಯದಲ್ಲಿ ಬಿಜೆಪಿ ಪಕ್ಷ “ರಾಷ್ಟ್ರೀಯ ಭದ್ರತೆಗಾಗಿ ನಾಗರೀಕರ” ಘೋಷವಾಕ್ಯದೊಂದಿಗೆ ಪಟ್ಟಣದ ಅಂಬೇಡ್ಕರ್ ವೃತದಲ್ಲಿ ತಿರಂಗಾ ಯಾತ್ರೆ ಜರುಗಿತು.
ಏ ೨೨ ರಂದು ಪಾಲ್ಗಾಂವನಲ್ಲಿ ಪಾಪಿ ಪಾಕಿಸ್ತಾನಿ ಉಗ್ರವಾದಿಗಳು ಹೆಸರು ಕೇಳಿ ೨೭ ಭಾರತೀಯರ ಮೇಲೆ ಗುಂಡಿನ ದಾಳಿ ನಡೆಸಿ ಹತ್ತೆಗೈದ ಹಿನ್ನೆಲೆಯಲ್ಲಿ ನಮ್ಮ ಭಾರತೀಯ ಸೈನಿಕರು ಆಪರೇಷನ್ ಸಿಂಧೂರ’ ಹೆಸರಿನಲ್ಲಿ ೧೦೦ ಅಧಿಕ ಉಗ್ರರು ಮತ್ತು ಪಾಕಿಸ್ತಾನದ ೩ ಮಿಲಿಟರಿ ಏರ್ ಬೇಸ್ ಮೇಲೆ ಪ್ರತಿ ದಾಳಿ ಮಾಡಿ ಎರಡನೇ ದಿನಕ್ಕೆ ಪಾಕಿಸ್ತಾನ ಕದನ ವಿರಾಮ ಘೋಷಣೆ ಮಾಡಿ ನಮ್ಮ ದೇಶದ ಮುಂದೆ ಮಂಡಿ ಊರಿ ಬೇಡಿಕೊಂಡು ವಿಶ್ವದ ಮುಂದೆ ಬೆತ್ತಲಾಗಿ ನಿಂತಿದೆ ನಮ್ಮ ಸೈನಿಕರ ಪರಾಕ್ರಮವನ್ನು ವಿಶ್ವದಲ್ಲೆಡೆ ಕೊಂಡಾಡಿದು ನಮ್ಮ ಭಾರತೀಯರು ಹೆಮ್ಮೆ ಪಡುವಂತದು ಎಂದು ಶ್ರೀಶೈಲಗೌಡ ಬಿರಾದಾರ. ಮಾಗಣಗೇರರವರು ಸೈನಿಕರ ಕಾರ್ಯಚರಣೆ ಬಗ್ಗೆ ಸಂತಸ ವ್ಯಕ್ತಪಡಿಸಿದರು
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯಿದರು ಭಾರತೀಯರಾದ ನಾವು ಒಟ್ಟಿಗೆ ಹೆಜ್ಜೆ ಹಾಕುತ್ತ ತ್ರಿವರ್ಣ ದ್ವಜದ ಅಡಿಯಲ್ಲಿ ಸೈನಿಕರಿಗೆ ಬೆಂಬಲ ಸೂಚಿಸಲು ತ್ರಿವರ್ಣ ಧ್ವಜ ಹಿಡಿದು ‘ಭಾರತ್ ಮಾತಾಕಿ ಜೈ’ ಹಾಗೂ ಜೈ ಹಿಂದ್ ಘೋಷಣೆ ಕೂಗುತ್ತಾ ಪಕ್ಷತಿತವಾಗಿ ಭಾರತದ ಯಶಸ್ಸನ್ನು ಸಂಭ್ರಮಿಸಬೇಕು ಆದರೆ ಕಾಂಗ್ರೆಸ್ ತನ್ನ ತುಚ್ಚ ಮನಸಿನ ರಾಜಕಾರಣ ಮುಂದುವರಿಸಿದು ತುಂಬಾ ನಾಚಿಗೆಡಿನ ಸಂಗತಿ. ಇನ್ನೂ ಒಂದು ಹೆಜ್ಜೆ ಮುಂದೆ ಇಟ್ಟು ಹೈಕಮಾಂಡಗೆ ಮೇಚ್ಚಿಸುವ ಭರದಲ್ಲಿ ಕಾಂಗ್ರೆಸಿನ ಶಾಸಕರೊಬ್ಬರು ನಮ್ಮ ಸೈನಿಕರು ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯ ಸಾಕ್ಷಿ ಕೇಳಿ ಸೈನಿಕರಿಗೆ ಅಪಮಾನ ಮಾಡಿದ್ದಾರೆ ತಮ್ಮಗೆ ನಾಚಿಕೆ ಮಾನ ಮೆರಿಯಾದೆ ಇದ್ದರೆ ೧೪೦ ಕೋಟಿ ಭಾರತೀಯರ ಕ್ಷಮೆ ಕೇಳಿ ಕುಡಲೆ ತಮ್ಮ ಶಾಸಕ ಸ್ಥಾನಕ್ಕೆ ರಮೇಶ್ ಅವರು ರಾಜಿನಾಮೆ ನೀಡಬೇಕು ಇಲ್ಲವಾದರೆ ಸ್ಪೀಕರ್ ಯು.ಟಿ. ಖಾದರವರು ಇವರನ್ನು ಕೂಡಲೇ ಶಾಸಕ ಸ್ಥಾನದಿಂದ ಉಚ್ಚಾಟಿಸಿ ನಮ್ಮ ಸೈನಿಕರಿಗೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು
ಈ ಸಂಧರ್ಭದಲ್ಲಿ ಮಠಾದಿಶರಾದ ಸಾರಂಗಮಠದ ಶ್ರೀಗಳು, ಆಲಮೇಲ ಮಠದ ಶ್ರೀಗಳು ಕನ್ನೊಳ್ಳಿ ಮಠದ ಶ್ರೀಗಳು ಯಂಕಂಚಿ ಶ್ರೀಗಳು ಸೇರಿದಂತೆ ಭಾಜಪಾ ಮಾಜಿ ಶಾಕರಾದ ರಮೇಶ್ ಭೂಸನೂರ,ಅರುಣ ಶಾಹಪುರ ಭಾಜಪಾ ಜಿಲ್ಲಾಧ್ಯಕ್ಷರಾದ ಜಿ.ಡಿ ಅಂಗಡಿ. ನಿವೃತ್ತ ಯೋದರು, ಭಾರತೀಯ ಜನತಾ ಪಕ್ಷದ ಜೀಲ್ಲಾ ಅಧ್ಯಕ್ಷರು, ಸಿಂದಗಿ , ಕಾಲೇಜಿನ ವಿದ್ಯಾರ್ಥಿ- ಪರಿಷತ್ತ, ಮಹಿಳೆಯರು ಹಾಗೂ ದೇಶಾಭಿಮಾನಿಗಳು
ಸಾರ್ವಜನಿಕರು ಉಪಸ್ಥೀತರಿದ್ದರು