ವಡಗೇರಾ : ಕೃಷಿ ಇಲಾಖೆಯಿಂದ ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರ ಹತ್ತಿರವೇ ಬಿತ್ತನೆ ಬೀಜ ರಸಗೊಬ್ಬರ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಬೇಕು ಎಂದು ರೈತರಿಗೆ ತಾಲೂಕಿನ ಹೈಯ್ಯಾಳ ಬಿ. ಹೋಬಳಿ ಕೃಷಿ ಅಧಿಕಾರಿ ನಾಗರಾಜ ಹೇಳಿದರು. ತಾಲೂಕಿನ ಹೈಯ್ಯಾಳ ಹೋಬಳಿಯ ಗುಂಡಗುರ್ತಿ ಮತ್ತು ಇತರೆ ಕೃಷಿ ಪರಿಕರ ಮತ್ತು ಬೀಜ ರಸಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ದಾಸ್ತಾನು ಮತ್ತು ಇತರೆ ಮಾಹಿತಿ ಪರಿಶೀಲಿಸಿ ಮಾತನಾಡಿದ ಅವರು ರೈತರು ತಾವು ಖರೀದಿಸಿದ ಬೀಜ ಗೊಬ್ಬರ ಇತರೆ ವಸ್ತುಗಳ ರಶೀದಿಯನ್ನು ಕಡ್ಡಾಯವಾಗಿ ಪಡೆಯಬೇಕು ಕಳಪೆ ಬೀಜ ಬಿತ್ತನೆಗಳಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದ್ದು,
ಆದ್ದರಿಂದ ಮಾರಾಟಗಾರರು ಯಾವುದೇ ಕಾರಣಕ್ಕೂ ನಕಲಿ ಬೀಜ ಗೊಬ್ಬರಗಳನ್ನು ಮಾರಾಟ ಮಾಡಬಾರದು ರೈತರು ಎಲ್ಲೆಂದರಲ್ಲಿ ಕಳಪೆ ಬೀಜ ಗೊಬ್ಬರಗಳನ್ನು ತೆಗೆದುಕೊಳ್ಳಬಾರದು ಅಂಗಡಿಯ ಮಾಲೀಕರು ಕೂಡಾ ಎಂಆರ್ ಪಿ ದರದಲ್ಲಿಯೇ ಮಾರಾಟ ಮಾಡಬೇಕು ಒಂದು ವೇಳೆ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಗಮನಕ್ಕೆ ಬಂದಲ್ಲಿ ಅಂತ ಅಂಗಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಂಗಡಿ ಲೈಸೆನ್ಸ್ ರದ್ದುಪಡಿಸುವುದಾಗಿ ಹೋಬಳಿ ಕೃಷಿ ಅಧಿಕಾರಿ ನಾಗರಾಜ ತಿಳಿಸಿದ್ದಾರೆ.