ಲಿಂಗಸೂಗೂರು :.ಪ್ರಧಾನ ಮಂತ್ರಿ ನರೇಂದ್ರ ಮೋದಿ ದಿಟ್ಟ ನಾಯಕತ್ವದಲ್ಲಿ ನಮ್ಮ ಸೈನಿಕರು ಪಾಕಿಸ್ತಾನ ದೇಶದ ಉಗ್ರಗಾಮಿಗಳ ನೆಲೆಯನ್ನು ಧ್ವಂಸಮಾಡಿ ನಿರ್ಮೂನೆ ಮಾಡಿದ ಆಪರೇಷನ್ ಸಿಂಧೂರ ಸಂಪೂರ್ಣ ಯಶಸ್ವಿಯಾಗಿದ್ದು ಅದರ ಅಂಗವಾಗಿ ತಿರಂಗಾ ಯಾತ್ರೆ ಯುವಕರಲ್ಲಿ ದೇಶ ಪ್ರೇಮದ ಜಾಗೃತಿ ಮೂಡಿಸುವುದಾಗಿದೆ ಎಂದು ಶಾಸಕ ಮಾನಪ ವಜ್ಜಲ ಹೇಳಿದರು.
ಅವರು ದೂಡ್ಡ ಹನುಮಂತ ದೇವಸ್ಥಾದಿಂದ ಲಕ್ಷಿö್ಮ ದೇವಸ್ಥಾನದರಗೆ ಯಾತ್ರೆಯಲ್ಲಿ ಭಾಗಿಯಾಗಿ ದೇವಸ್ಥಾನದ ಮುಂದೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಪಾಕಿಸ್ತಾನದ ಉಗ್ರಗಾಮಿಗಳು ಕಾಶ್ಮೀರ ರಾಜ್ಯದಲ್ಲಿ ಅಮಾಯಕ 26 ಕುಟುಂಬದ ಮುಖ್ಯಸ್ಥರನ್ನು ಗುಂಡಿನಿಂದ ಹೊಡೆದು ಸಾಯಿಸಿ ನಿಯಮಿತ ನಮ್ಮ ಸೈನಿಕರು ಆಪರೇಷನ ಸಿಂಧೂರ ಮೂಲಕ ಉಗ್ರಗಾಮಿಗಳು ತಲೆ ಎತ್ತದಂತೆ ಮಾಡಿದರು, ಪಾಕಿಸ್ತಾನ ಯುದ್ಧದಲ್ಲಿ ಗೆದಿದ್ದೆಂದು ಸುಳ್ಳುಬೊಗಳಿಬಿಡುತ್ತಾ ಅಮೆರಿಕ ಅಧ್ಯಕ್ಷ ಟ್ರಂಪ ಕಾಲ್ಲಿಡ್ಡು ಕದನ ವಿರಾಮ ಘೋಷಿಸಿದರು ಕೆಲವಡೆ ತಮ್ಮ ಚಟುವಟಿಕೆ ನಡೆಸಿದ್ದು ಅದಕ್ಕೆ ಭಾರತ ಅಂಜುವುದಿಲ್ಲ, ನಮ್ಮ ದೇಶದ ಸೈನಿಕರು ನಡೆಸಿದ್ದು ಪಿಚ್ಕರ್ ಬಾಕಿಯಿದೆ ಎಂದು ಹೇಳಿದರು.
ಮಾಜಿ ಸೈನಿಕ ವಿರುಪಾಕ್ಷಪ್ಪ ಹಿರೆಮಠ ಮಾತನಾಡಿ ಪಾಕಿಸ್ತಾನವನ್ನು ಬಗ್ಗಿಬಡಿಯಲು ನಮ್ಮ ಸೈನಿಕರು ತಕ್ಕ ಉತ್ತರ ನೀಡಿದಾರೆ ಹಿಂದೆ ದೇಶದಿಂದ ಬ್ರಿಟೀಷರನ್ನು ಹೊಡಿಸಲು ವೀರರಾಣಿ ಕಿತ್ತೂರ ಚನ್ನಮ್ಮ, ಜಾನ್ಸಿರಾಣಿ ಲಕ್ಷಿö್ಮಬಾಯಿ ಅಂತವರು ಜನಿಸಿದ ದೇಶವಾಗಿದೆ ಪಾಕಿಸ್ತಾನದ ಮೋಸದ ಆಟ ನಮ್ಮ ದೆಶದ ಸೈನಿಕರ ಮುಂದೆ ನಡೆಯುವುದಿಲ್ಲ ಎಂದು ತಿಳಿಸಿದರು.
ತಿರಂಗ ಯಾತ್ರೆಯಲ್ಲಿ ಬಿಜೆಪಿ ಮುಖಂಡ ಶರಣಪ್ಪ ಮೇಟಿ, ಗಿರಿಮಲ್ಲಣಗೌಡ, ಜಗನಾಥ ಕುಲಕರ್ಣಿ ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಲ , ತಾಲೂಕು ಅಧ್ಯಕ್ಷ ಆಯ್ಯಪ್ಪ ಮಾಳೂರು, ಬಸನಗೌಡ ಮೇಟಿ, ಪರಮೇಶ ಯಾದವ, ಸಂತೋಷ ರಾಜಗುರು, ದ್ಯಾಮಣ್ಣ ನಾಯಕ ಹಾಗೂ ಮಾಜಿ ಸೈನಿಕ ಸಂಘದ ತಾಲೂಕು ಅಧ್ಯಕ್ಷ ವೀರನಗೌಡ ಬಯಾಪೂರ, ಅನಂತದಾಸ, ಅಮರೇಶ ಹೆಸರೂರು, ಮಾಜಿ ಸೈನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಿದರು.