ಯಲಹಂಕದಲ್ಲಿ ವೀರ ಸಾವರ್ಕರ್ ಜಯಂತಿ- ಮೆರವಣಿಗೆ

YDL NEWS
1 Min Read

ಬೆಂಗಳೂರು: ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ನಾಯಕ ವಿನಾಯಕ ದಾಮೋದರ್ ವೀರ ಸಾವರ್ಕರ್ ರವರ ಜಯಂತ್ಯುತ್ಸವದ ಪ್ರಯುಕ್ತ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ ಇಂದು ವೀರ ಸಾವರ್ಕರ್ ರವರ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಲಾಯಿತು.

ಭಾರತೀಯ ಜನತಾ ಪಾರ್ಟಿ ಯಲಹಂಕ ನಗರ- ಮಂಡಲದ ವತಿಯಿಂದ ಹಾಗೂ ಸಂಘ ಪರಿವಾರದ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಯಲಹಂಕ ಉಪನಗರದ ಮದರ್ ಡೈರಿ ವೃತ್ತದ ಬಳಿ ಇರುವ ಮೇಲ್ಸೇತುವೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ರವರ ಹೆಸರನ್ನಿಟ್ಟ ಹೆಗ್ಗಳಿಕೆ ಶಾಸಕ ಎಸ್.ಆರ್.ವಿಶ್ವನಾಥ್ ಅವರಿಗೆ ಸಲ್ಲಬೇಕು. ಅಲ್ಲದೆ ಪ್ರತಿ ವರ್ಷ “ವೀರ ಸಾವರ್ಕರ್” ರವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವುದಾಗಿ ದೃಢ ಸಂಕಲ್ಪವನ್ನು ಅವರು ಮಾಡಿದ್ದಾರೆ ಎಂದು ಪಕ್ಷದ ಮುಖಂಡರು ವಿವರಿಸಿದರು.

ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹಾಗೂ ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This Article