ಲಿಂಗಸೂಗೂರು : ತಮಿಳು ನಟ ಕಮಲ್ ಹಾಸನ್ ಅವರು ಕನ್ನಡ ಭಾಷೆಗೆ ಅವಹೇಳನ ಮಾಡಿದ್ದು, ತಮಿಳುನಿಂದಲೇ ಕನ್ನಡ ಭಾಷೆ ಬಂದಿದ್ದು, ನೀವು ಅದಕ್ಕೆ ತಲೆಬಾಗಲೇಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಭಾವನೆಗಳಿಗೆ ದಕ್ಕೆ ತಂದಿದ್ದಾನೆ. ಅಲ್ಲದೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವುದು ಮತ್ತಷ್ಟು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೇಳಿಕೆ ಹಿಂಪಡೆದು ಕನ್ನಡಿಗರ ಕ್ಷಮೆಯಾಚಿಸಬೇಕು. ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಲಿಂಗಸುಗೂರು ಸಹಾಯಕ ಆಯುಕ್ತರು ಮೂಲಕ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ, ವಿಧಾನಸೌಧ ಬೆಂಗಳೂರು. ಇವರಿಗೆ ಮನವಿ ಸಲ್ಲಿಸಿದರು
ದ್ರಾವಿಡ ಭಾಷೆಗಳಲ್ಲಿಕನ್ನಡ ಭಾಷೆ ಅತೀ ಮಹತ್ವದ ಸ್ಥಾನ ಹೊಂದಿ ಕವಿರಾಜ ಮಾರ್ಗ ಅತೀ ಮಹತ್ವದ ಕೃತಿಯಾಗಿ ಕನ್ನಡ ನಾಡು, ನಾಡವರು ಛಂದಸ್ಸು ವ್ಯಾಕರಣ, ಅಲಂಕಾರ ಮುಂತಾದ ಮೌಲಿಕ ವಿಷಯ ಹೊಂದುವುದರ ಮೂಲಕ ಜಗತ್ತಿನ ಅತೀ ಶ್ರೀಮಂತ ಭಾಷೆಯಾಗಿದೆ.
ಕನ್ನಡ ಸಾಹಿತ್ಯವು ಜಗತ್ತಿನ ಭಾಷಾ ಪ್ರಪಂಚದಲ್ಲಿ ಅತೀ ಶ್ರೀಮಂತ ಭಾಷೆಯಾಗಿದೆ. ಆರಂಭದಲ್ಲಿ ಆದಿಕವಿ ಪಂಪ, ಜನ್ನ, ರನ್ನ ರಿಂದ ಚಂಪು ಸಾಹಿತ್ಯ ಬೆಳೆದು ಬಂದು ಕನ್ನಡ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು. ಜತೆಗೆ ಮಹಾಕಾವ್ಯ ರಚಿಸಿ ಲೋಕದ ಜನತೆಗೆ ತಮ್ಮ ಕಾವ್ಯದ ಮುಖಾಂತರ ಅನೇಕ ಪಾತ್ರಗಳ ಮೂಲಕ ಲೋಕಾನುಭವ ತೋರಿಸಿ ಕೊಟ್ಟಂತ ಮಹಾನ್ ಕವಿಗಳ ಕೊಡುಗೆ ಕನ್ನಡಕ್ಕೆ ಅಪಾರವಾಗಿದೆ. ನಂತರ 12ನೇ ಶತಮಾನದ ಶಿವ ಶರಣರಿಂದ ರಚನೆಯಾದ ವಚನ ಸಾಹಿತ್ಯ ವಿಶ್ವಕ್ಕೆ ಮೌಲಿಕವಾದ ಕೊಡುಗೆ ನೀಡಿ ಜನಸಾಮಾನ್ಯರ ಸಾಹಿತ್ಯವಾಗಿ ಶ್ರೇಷ್ಠ ಸಾಹಿತ್ಯವೆಂದು ತೋರಿಸಿಕೊಟ್ಟಿತು. ಹಳಗನ್ನಡ ಷಟ್ಪದಿ ರಗಳೆ ತ್ರಿಪದಿ ಸಾಂಗತ್ಯ, ಕೀರ್ತನೆ ಮುಂತಾದ ರೂಪದಲ್ಲಿ ನಮ್ಮ ಕನ್ನಡ ಸಾಹಿತ್ಯ ಸರಳ ಭಾಷೆಯಲ್ಲಿ ರಚನೆಗೊಳ್ಳುತ್ತ ಬಂದಿದೆ. ಹರಿಹರ ರಾಘವಾಂಕ, ಕುಮಾರವ್ಯಾಸ, ವಾಲ್ಮೀಕಿ, ಲಕ್ಷಿö್ಮÃಶ, ಸರ್ವಜ್ಞ, ಹರಿದಾಸ ಪರಂಪರೆಯ ಸಾಹಿತ್ಯ ಜಾನಪದ ಸಾಹಿತ್ಯ ನವಯುಗದ ಹೊಸಗನ್ನಡ ಸಾಹಿತ್ಯದ ಕವಿಗಳಾದ ಬೇಂದ್ರೆ, ಶಿವರಾಮ ಕಾರಂತ, ಕುವೆಂಪು, ಡಿ.ಎಸ್.ಕರ್ಕಿ, ಚನ್ನವೀರ ಕಣವಿ, ಡಾ. ಜಿ.ಎಸ್.ಶಿವರುದ್ರಪ್ಪ ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸಿದ್ದಾರೆ. ಅಲ್ಲದೇ ದೇಶದಲ್ಲಿಯೇ 8 ಜ್ಞಾನಪೀಠ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಲಭಿಸಿದೆ.
ಇಂತಹ ಶ್ರೀಮಂತ ಭಾಷೆಯನ್ನು ಕುರಿತು
ದಿನಾಂಕ: 05-06-2025ರಂದು ಕರ್ನಾಟಕದಲ್ಲಿ ಕಮಲ್ ಹಾಸನ್ ರವರ ಹೊಸ ಚಿತ್ರ “ತಂಗ್ ಲೈಫ್” ಚಲನಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು. ಕನ್ನಡ ಭಾಷೆಯ ಸ್ವಾಭಿಮಾನವನ್ನು ಮತ್ತು ಹಿರಿಮೆಯನ್ನು ಕಾಪಾಡುವಬೇಕಾಗಿರುವುದರಿಂದ ಅವರ ಮೇಲೆ ಸರ್ಕಾರ ಒತ್ತಡ ಹಾಕಿ ಕನ್ನಡಿಗರ ಕ್ಷಮೆ ಕೇಳಬೇಕೆಂಬುವುದು ನಮ್ಮ ಒತ್ತಾಯವಾಗಿದೆ, ಎಂದು ಕರವೇ ತಾಲ್ಲೂಕು ಅಧ್ಯಕ್ಷರಾದ ಜಿಲಾನಿ ಪಾಷಾ ನೇತೃತ್ವದಲ್ಲಿ ಲಿಂಗಸೂಗೂರು ಬಸ್ಟ್ಯಾಂಡ್ ಸರ್ಕಲ್ ನಲ್ಲಿ ಕಮಲಹಾಸನ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು ಈ ಸಂದರ್ಭ ದಲ್ಲಿ ಕರವೇ ಕಾರ್ಯ ಕರ್ತರು. ಉಪಸ್ಥಿತರಿದ್ದರು.