ಲಿಂಗಸಗೂರು. ಜು. 19.- ಶುಕ್ರವಾರ ಪಟ್ಟಣದ ಜಾಮಿಯಾ ಮಸ್ಜಿ ದ ನಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ತಂಜಮೀನ್ ಮುಸ್ಲಿಂ ಇನ್ ಕಮಿಟಿಗೆ ನೂತನವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಹಾಗೂ ಸದಸ್ಯರಾನ್ನಾಗಿ ಸರ್ವನುಮತದಿಂದ ಆಯ್ಕೆ ಮಾಡಲಾಯಿತು.
ತಂಜು ಮೀನ್ ಮುಸ್ಲಿಂ ಕಮಿಟಿಯ ನೂತನ ಅಧ್ಯಕ್ಷರಾಗಿ ಜನಾಬ್ ಅಬ್ದುಲ್ ಮೋಹಸಿನ ರೈಸ್ ಚಾವೂಸ್, ಉಪಾಧ್ಯಕ್ಷರಾಗಿ ಜನಾಬ್ ಖಾದರ್ ಪಾಷಾ, ಕಾರ್ಯದರ್ಶಿಯಾಗಿ ಅಬ್ದುಲ್ ಸತ್ತಾರಸಾಬ್, ಸಹ ಕಾರ್ಯದರ್ಶಿಯಾಗಿ ಅಬ್ದುಲ್ ನಬಿಸಾಬ್ ಮನಿಯಾರ್, ಖಜಾಂಚಿಯಾಗಿ ಎಸ್. ಎ ಸಲಿಂಸಾಬ್, ಹಾಗೂ ಸದಸ್ಯರನ್ನಾಗಿ ಹಲವರನ್ನು ಮುಸ್ಲಿಂ ಸಮಾಜದ ಸರ್ವ ಮುಖಂಡರ ಹಾಗೂ ಹಿರಿಯರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಸ್ಲಿಂ ಕಮಿಟಿ ಮುಖಂಡರಾದ ಹಾರೂನ ಸಾಬ್, ಅಲ್ಲಾವುದ್ದೀನ್ ಪಟೇಲ್, ಜಿಲಾನಿ ಪಾಷಾ, ಮಹಮ್ಮದ್ ರಫಿ, ಫಯಾಜ್ ಅಹ್ಮದ್, ಖಾಜಾಹುಸೇನ್ ಫುಲ್ ವಾಲೆ, ಹೈಮದ ಚಾವುಸ್, ಅಬ್ದುಲ್ ನಬಿ ಸಾಬ್ ಮನಿಯರ್, ಅಲ್ಲಾಭಕ್ಷ, ನವಾಬ ಆಹ್ಮದ,ಫ್ರೂಟ್ ಮಹ್ಮದ್ ಇಬ್ರಹಿಂ, ಆಜೀಜ್ ಪಾಷಾ, ಫೈಸಲ್ ಚಾವುಸ್, ಸೋಹಿಲ್,ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಎಲ್ಲ ಮುಖಂಡರು ಯುವಕರು ಸೇರಿ ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಮುಸ್ಲಿಂ ಸಮಾಜದ ಎಲ್ಲರನ್ನು ನೂತನ ಅಧ್ಯಕ್ಷ ಉಪಾಧ್ಯಕ್ಷರುವಿಶ್ವಾಸಕ್ಕೆ ತೆಗೆದುಕೊಂಡು ಸಮಾಜದ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.