ಲಿಂಗಸುಗೂರು: ದಲಿತಪರ ಹೋರಟಗಾರರು, ದಲಿತ ಪರ ಸಂಘಟನೆಗಳು ಮತ್ತು ಪ್ರಗತಿಪರ ಸಂಘಟನೆಗಳ ದಶಕಗಳ ಹೋರಾಟದ ಫಲವಾಗಿ, ಲಿಂಗಸುಗೂರಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೆ ಸಿದ್ಧತೆ ನಡೆದಿದೆ.
ಈ ಮಹತ್ವದ ಭವನ ನಿರ್ಮಾಣಕ್ಕೆ ಪೂರಕ ಕಾರಣರಾದವರು ಮಾಜಿ ಶಾಸಕರಾದ ಡಿ.ಎಸ್. ಹೂಲಗೇರಿ. ಕಳೆದ ಹಲವು ವರ್ಷಗಳಿಂದ ಅಂಬೇಡ್ಕರ್ ಭವನ ನಿರ್ಮಾಣದ ಹೋರಾಟಕ್ಕೆ ರಾಜಕೀಯ ಶಕ್ತಿ ಹಾಗೂ ಸಂಘಟನೆಗಳ ಒತ್ತಾಯ ಇದ್ದರೂ, ಯಾವುದೇ ಶಾಸಕರು ಈ ಬಗ್ಗೆ ಗಂಭೀರತೆ ತೋರುವ ಪರಿಸ್ಥಿತಿ ಇರಲಿಲ್ಲ. ಆದರೆ, ಡಿ.ಎಸ್. ಹೂಲಗೇರಿ ಶಾಸಕರಾಗಿದ್ದ ವೇಳೆ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಅವರ ಬಳಿ ಮನವಿ ಸಲ್ಲಿಸಿದಾಗ, “ನಾನು ಮೀಸಲು ಕ್ಷೇತ್ರದಿಂದ ಶಾಸಕನಾಗಲು ಡಾ. ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ, ಅಂಬೇಡ್ಕರ್ ಭವನ ನಿರ್ಮಾಣ ನನ್ನ ಜವಾಬ್ದಾರಿ” ಎಂದು ಸ್ಪಷ್ಟವಾಗಿ ಹೇಳಿ ಸರ್ಕಾರದ ಮೇಲೆ ಒತ್ತಡ ಹೇರಿದರು.
ಹೂಲಗೇರಿ ಸಾಹೇಬರು ಕೊಟ್ಟ ಮಾತಿನಂತೆ ನಡೆದುಕೊಂಡು ಭವನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದು, ಇದು ದಲಿತ ಸಮುದಾಯದ ತಲಾ ತಲಾಂತರದ ಕನಸಿನ ಸಾಧನೆ. ಅವರ ಈ ಶ್ರಮಕ್ಕೆ ರಾಘವೇಂದ್ರ ಡಿ. ತುಪ್ಪದ್ ಉಪಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ, ಲಿಂಗಸುಗೂರು, ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.