ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಿಕ್ಕ ಬಾಗೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪ್ರಸ್ತುತ ಇರುವ ಗಿರಿಯಾಲ ಮತ್ತು ಬೆಣಚಿನ ಮರಡಿ ಗ್ರಾಮಗಳನ್ನು ಸೇರಿಸಿ ಹೊಸ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚಿಸುವುದಕ್ಕೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಆಗ್ರಹ ಮಾಡಲಾಯಿತು.
ಗ್ರಾಮ ಪಂಚಾಯಿತಿ ಚುನಾವಣೆ ಹೊಸ್ತಿಲಲ್ಲೇ ಗಿರಿಯಾಲ, ಬೆಣಚಿನಮರಡಿ ಗ್ರಾಮಗಳು ಒಗ್ಗಟ್ಟಾಗಿ ಪ್ರತ್ಯೇಕ ಗ್ರಾಮ ಪಂಚಾಯಿತಿಯ ರಚನೆಯ ಮುನ್ನೆಲೆಗೆ ಬಂದಿದೆ.
ಇಂದು ಗಿರಿಯಾಲ ಹಾಗೂ ಬೆಣಚಿನಮರಡಿ ಗ್ರಾಮಸ್ಥರು ಸೇರಿ ಹೊಸ ಗ್ರಾಮ ಪಂಚಾಯಿತಿ ರಚನೆ ಮಾಡಬೇಕು, ಚಿಕ್ಕ ಬಾಗೇವಾಡಿ ಗ್ರಾಮ ಪಂಚಾಯಿತಿಯಿಂದ ಬೇರ್ಪಡಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮಸ್ಥರು ಒಗ್ಗಟ್ಟಾಗಿ ಆಗ್ರಹ ಮಾಡಿದರು. ಇವರ ಹೋರಾಟಕ್ಕೆ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಪತ್ರಕರ್ತ ಬಸವರಾಜು ಸಹ ಸಾಥ್ ನೀಡಿದರು.