ಕೈ ಶಾಸಕರೊಂದಿಗೆ ಸಿಎಂ ಸಭೆಗೆ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದೇನು?

YDL NEWS
2 Min Read

ಬೆಂಗಳೂರು:- ಅನುದಾನ, ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಕುರಿತು ಜಿಲ್ಲಾವಾರು ಶಾಸಕರು, ಸಚಿವರು ಹಾಗೂ ಸಚಿವರೊಂದಿಗೆ ಎರಡನೇ ದಿನವಾದ ಇಂದು ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಚರ್ಚೆ ನಡೆಸಿದರು.

ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಭಾಗಿಯಾಗಿದ್ದರು.ಜಿಲ್ಲೆಯ ಶಾಸಕರು ಹಾಗೂ ಸಚಿವರೊಂದಿಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳು ಹಾಗೂ ಶಾಸಕರಿಗೆ ನೀಡಲಾಗಿರುವ ವಿವಿಧ ಅನುದಾನದ ಬಳಕೆಯ ಹಾಗೂ ಗ್ಯಾರಂಟಿ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ವೈದ್ಯಕೀಯ, ಶಿಕ್ಷಣ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ವೇಗವಾಗಿ ಅಭಿವೃದ್ಧಿಪಡಿಸುವುದು, ಬಾಕಿ ಉಳಿದ ಕಾಮಗಾರಿಗಳನ್ನು ಗಡುವಿನೊಳಗೆ ಪೂರ್ಣಗೊಳಿಸುವುದು ಹಾಗೂ ಗ್ಯಾರಂಟಿ ಯೋಜನೆಗಳ ಲಾಭವನ್ನು ಪ್ರತಿ ಅರ್ಹ ಫಲಾನುಭವಿಗೆ ತಲುಪಿಸುವ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟ ಮಾರ್ಗದರ್ಶನ ನೀಡಿದರು.

ಸಭೆ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಅಸಮಾಧಾನ ಏನಿಲ್ಲ, ನೀರಾವರಿ ಯೋಜನೆ ಬಗ್ಗೆ ಮಾತಾಡಿದ್ದೇವೆ. ಸಿಎಂ ಮಾಡ್ತೇವೆ ಎಂದಿದ್ದಾರೆ. ಸಿಎಂ ವಯಕ್ತಿಕವಾಗಿ ಮಾತಾಡಿಸಿದ್ದಾರೆ. ಕ್ಷೇತ್ರಕ್ಕೆ ಸಂಭಂದಿಸಿದ ಸಮಸ್ಯೆಯನ್ನ ಹೇಳಿಕೊಂಡಿದ್ದಾರೆ. ಕೆಲವು ಸಮಸ್ಯೆಯನ್ನ ಸಿಎಂ ತಕ್ಷಣ ಬಗೆಹರಿಸಿದ್ದಾರೆ. ಇನ್ನುಳಿದಂತೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ. ಸಿಎಂ ವಿವೇಚನೆಯ ಹಣ 50ಕೋಟಿ. ಇದು ಎಕ್ಸ್‌ಟ್ರಾ ಬೋನಸ್. ನಮ್ಮ ಇಲಾಖೆಯಿಂದ ಬೇರೆ ಹಣ ಕೊಡ್ತೇವೆ ಎಂದರು.

ಸುರ್ಜೇವಾಲ ಹಾಗೂ ಸಿಎಂ ಸಭೆಗಳ ವ್ಯತ್ಯಾಸ ವಿಚಾರ:

ಸುರ್ಜೇವಾಲ ಹಾಗೂ ಸಿಎಂ ಸಭೆಗಳ ವ್ಯತ್ಯಾಸ ವಿಚಾರವಾಗಿ ಮಾತನಾಡಿ, ನಮ್ಮ ಸಮಸ್ಯೆ ಪರಿಹಾರಕ್ಕೆ ವೇದಿಕೆ ಇದು. ರಾಜುಕಾಗೆ ಸಮಸ್ಯೆ ಬಗೆಹರೀತಾ ಅನ್ನೋ ಪ್ರಶ್ನೆ. ನಮ್ಮ ಇಲಾಖೆ ಅಲ್ಲ ಎಂದರು.

ಆಗಸ್ಟ್ 2ರಂದು ದಲಿತ ಶಾಸಕರ ಸಭೆ ವಿಚಾರ:

ಆಗಸ್ಟ್ 2ರಂದು ದಲಿತ ಶಾಸಕರ ಸಭೆ ವಿಚಾರವಾಗಿ ಮಾತನಾಡಿ, ಇಲ್ಲ ಹಾಗೆನೂ ಸಭೆ ಕರೆದಿಲ್ಲ. ಪರಮೇಶ್ವರ್ ಅವರ ಮನೆಯಲ್ಲಿ ಕರೆದಿದ್ರೆ ಕರೆದಿರಬಹುದು. ಕರೆದ್ರೆ ನಾನೂ ಸಹ ಹೋಗ್ತೇನೆ ಎಂದರು.

ಆಪ್ತರ ಮನೆ ಮೇಲೆ ಐಟಿ ದಾಳಿ ವಿಚಾರ:

ಜಾರ್ಜ್ ಮನೆ ಹಾಗೂ ಆಪ್ತರ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಮಾತನಾಡಿ, ನನಗೆ ಗೊತ್ತಿಲ್ಲ. ಮಾಹಿತಿ ಸಿಕ್ಕಿದ ಬಳಿಕ ಮಾತಾಡ್ತೇನೆ ಎಂದರು.

ಕರೆಮ್ಮ ನಾಯಕ್ ಪ್ರತಿಭಟನೆ ಮಾಡೋ ಎಚ್ಚರಿಕೆ ವಿಚಾರ:

ಅವೈಜ್ಞಾನಿಕ ಟೋಲ್ ವಿರುದ್ಧ ಶಾಸಕಿ ಕರೆಮ್ಮ ನಾಯಕ್ ಪ್ರತಿಭಟನೆ ಮಾಡೋ ಎಚ್ಚರಿಕೆ ವಿಚಾರವಾಗಿ ಮಾತನಾಡಿ, ಕಾನೂನಿನ ಪ್ರಕಾರ ಹಾಕಲು ಅವಕಾಶ ಇದೆ ಹಾಕಿದ್ದೇವೆ. ಹಿಂದೆ ಟೆಂಡರ್ ಕರೆದಾಗ ಬಂದಿರಲಿಲ್ಲ. ಈಗ ಬಂದಿದ್ದಾರೆ ಹಾಕಿದ್ದೇವೆ. ಶಾಸಕರನ್ನ, ಜನರನ್ನ ಎರಡನ್ನೂ ನೋಡಬೇಕಿದೆ. ಟೆಂಡರ್ ಆಗಿದೆ, ನಮಗೆ ದುಡ್ಡು ತುಂಬ್ತಿದ್ದಾರೆ. ರಸ್ತೆ ನ್ಯೂನ್ಯತೆ ಇದೆ ಅಂತ ಹೇಳಿದ್ದಾರೆ. ಅದನ್ನ ಸರಿಪಡಿಸುವ ಬಗ್ಗೆ ಕ್ರಮ ತೆಗೆದುಕೊಳ್ತೇವೆ ಎಂದರು.

ದೀಪಾವಳಿ ಧಮಾಕ ಅಂತ ಡಿಸ್ಕೌಂಟ್ ಇರುತ್ತೆ:

ದೀಪಾವಳಿ ವೇಳೆ ಕಾಂಗ್ರೆಸ್ ಸಂಚಲನ ಅಂತ‌ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಹೌದು ದೀಪಾವಳಿ ಧಮಾಕ ಅಂತ ಡಿಸ್ಕೌಂಟ್ ಇರುತ್ತೆ. ದೊಡ್ಡ ದೊಡ್ಡ ಡಿಸ್ಕೌಂಟ್ ಕೊಡ್ತಾರೆ. ಅದು ಬಿಟ್ರೆ, ರಾಜಕೀಯ ಧಮಾಕ ಏನಿಲ್ಲ ಎಂದರು.

Share This Article