ಕೆಆರ್ಐಡಿಎಲ್ ದಿನಗೂಲಿ ನೌಕರನಾಗಿದ್ದವ ಇಂದು ಆಗರ್ಭ ಶ್ರೀಮಂತ: ಕೊಪ್ಪಳ, ಭಾಗ್ಯ ನಗರದಲ್ಲಿ 24 ಮನೆ! ಲೋಕಾಯುಕ್ತ ದಾಳಿಯಲಿ ಬಯಲು

YDL NEWS
1 Min Read

ಕೊಪ್ಪಳ :: ಕೊಪ್ಪಳದ ಕೆಆರ್ಐಡಿಎಲ್ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ಬಂಡಿಯ ಅಕ್ರಮ ಸಂಪತ್ತನ್ನು ಲೋಕಾಯುಕ್ತ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಕಳಕಪ್ಪ ಬಂಡಿ ಕೊಪ್ಪಳ ಮತ್ತು ವಿವಿಧ ಸ್ಥಳದ 24 ಮನೆಗಳು, ಆರು ಪ್ಲಾಟ್‌ಗಳು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣಗಳನ್ನು ಹೊಂದಿರುವುದು ಗುರುವಾರ ಬೆಳಗ್ಗೆ ಲೋಕಾಯುಕ್ತ ನಡೆಸಿದ ದಾಳಿ ವೇಳೆ ಪತ್ತೆಯಾಗಿದೆ.

 

 

ಕೊಪ್ಪಳ, ಜುಲೈ 31: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದಲ್ಲಿ (KRIDL) ಹೊರಗುತ್ತಿದೆ ಆಧಾರದಲ್ಲಿ ದಿನಗೂಲಿ ನೌಕರನಾಗಿದ್ದ ಕಳಕಪ್ಪ ಬಂಡಿ ಇಂದು ಆಗರ್ಭ ಶ್ರೀಮಂತ! ಈತನ ಒಡೆತನದಲ್ಲಿ ಕೊಪ್ಪಳ (Koappal) ಹಾಗೂ ಭಾಗ್ಯ ನಗರದಲ್ಲಿ 24 ಮನೆಗಳಿವೆ. ತಮ್ಮನ, ಹೆಂಡತಿಯ ತಮ್ಮನ ಹೆಸರಿನಲ್ಲಿಯೂ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾತನ ಬಂಡವಾಳವನ್ನು ಇದೀಗ ಲೋಕಾಯಕ್ತ ಅಧಿಕಾರಿಗಳು ಬಯಲು ಮಾಡಿದ್ದಾರೆ. ಭ್ರಷ್ಟಾಚಾರದಿಂದ ಅಪಾರ ಸಂಪತ್ತು ಕೂಡಿಹಾಕಿದಾತ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಕೆಲವು ದಿನಗಳ ಹಿಂದಷ್ಟೇ ಕಳಕಪ್ಪ ಬಂಡಿ ವಿರುದ್ಧ ಕೆಆರ್ಐಡಿಎಲ್ ಅಧಿಕಾರಿಗಳೇ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದರ ಆಧಾರದಲ್ಲಿ ಗುರುವಾರ ಬೆಳಗ್ಗೆ ದಾಳಿ ಮಾಡಿದ ಲೋಕಾಯುಕ್ತ ಅಧಿಕಾರಿಗಳು ಆತನ ಸಂಪತ್ತು ಕಂಡು ಶಾಕ್ ಆಗಿದ್ದಾರೆ.

 

 

ಕಳಕಪ್ಪ ಬಂಡಿ ಕೊಪ್ಪಳ ನಗರದ ವಿವಿಧ ಕಡೆ 24 ಮನೆಗಳು, ಆರು ಪ್ಲಾಟ್ ಹೊಂದಿರುವುದು ಲೋಕಾಯುಕ್ತ ದಾಳಿಯಿಂದ ತಿಳಿದುಬಂದಿದೆ. ಇಷ್ಟೆ ಅಲ್ಲದೆ, ತಮ್ಮನ ಹಾಗೂ ಪತ್ನಿಯ ತಮ್ಮನ ಹೆಸರಿನಲ್ಲಿ ಬೇನಾಮಿ ಆಸ್ತಿ ಮಾಡಿರುವುದೂ ಗೊತ್ತಾಗಿದೆ.

 

ಕೆಆರ್ಐಡಿಎಲ್ ಹಗರಣದ ಪ್ರಮುಖ ಸೂತ್ರಧಾರಿ ಕಳಕಪ್ಪ ಬಂಡಿ

ಮನೆಗಳು, ಫ್ಲಾಟ್ ಮಾತ್ರವಲ್ಲದೆ ಕಳಕಪ್ಪ ಬಂಡಿ ಮನೆಯಿಂದ ಚಿನ್ನಾಭಾರಣಗಳನ್ನೂ ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮೂಲತಃ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬಂಡಿಹಾಳ ನಿವಾಸಿಯಾಗಿರುವ ಕಳಕಪ್ಪ ಬಂಡಿ ಸುಮಾರು 20 ವರ್ಷಗಳ ಕಾಲ ಕೆಆರ್ಐಡಿಎಲ್ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡಿದ್ದ. 15,000 ರೂ. ವೇತನಕ್ಕೆ ದುಡಿಯುತ್ತಿದ್ದ ಎನ್ನಲಾಗಿದೆ.

 

ವರದಿ :: ಯಮನೂರ ಕೊಪ್ಪಳ

Share This Article