ಲಿಂಗಸುಗೂರು: ತಾಲೂಕಿನಲ್ಲಿ ಮನೋರಂಜನೆ ಹೆಸರಲ್ಲಿ ಕ್ಲಬ್‌ಗಳನ್ನು ನಿರ್ಮಿಸಿಕೊಂಡು ಇಸ್ಪೀಟು ಜೂಜಾಟ ಭರ್ಜರಿಯಾಗಿ ನಡೆಯುತ್ತಿದೆ.
ಪಟ್ಟಣದ ಎರಡು ಕ್ಲಬ್‌ಗಳಲ್ಲಿ ಮನೋರಂಜನಾ ಪರವಾನಿಗೆ ಪಡೆದು ನಿರಂತರವಾಗಿ ಇಸ್ಪೀಟು ಆಟ ನಡೆಯುತ್ತಿವೆ ಇದರಲ್ಲಿ ಯುವಸಮುದಾಯ ಹಾಳಾಗುತ್ತಿದ್ದು ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲಾ ಪೋಲಿಸ್ ಇಲಾಖೆ ಸಂಪೂರ್ಣವಾಗಿ ಕಡಿವಾಣ ಹಾಕಬೇಕಿತ್ತು ಆದರೆ ಇಲ್ಲಿಯಬರೆಗೂ ಭೇಟಿಯೂ ಸಹ ನೀಡಲ್ಲ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ ಇದರಲ್ಲಿ ಸರ್ಕಾರಿ ನೌಕರರು ಸಹ ತಮ್ಮ ಕೆಲಸವನ್ನು ಬಿಟ್ಟು ಈ ಆಟ ಆಡಲು ಕ್ಲಬ್‌ಗಳಲ್ಲಿಯೇ ಇರುತ್ತಿವುದು ಬೇಸರದ ಸಂಗತಿಯಾಗಿದೆ.
ಕ್ಲಬ್‌ಗಳು ಸಂಪೂರ್ಣವಾಗಿ ನಿಯಮವನ್ನು ಪಾಲಿಸದೆ ಇಸ್ಪೀಟು ಆಟವನ್ನು ನಡೆಸುತ್ತಿದ್ದಾರೆ ಇಂತಹ ಕ್ಲಬ್‌ಗಳ ಮೇಲೆ ಸಂಬAಧಿಸಿದ ಅಧಿಕಾರಿಗಳು ದಾಳಿ ನಡೆಸಬೇಕಿದೆ ಅಮರ ಸ್ಪೋರ್ಟ್ಸ ಮತ್ತು ಕಲ್ಚರಲ್ ಮತ್ತು ಪ್ರೇಂಡ್ಸ ಸ್ಪೋರ್ಟ್ಸ ಹಾಗೂ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ಗಳ್ಲಿ ನಿರಂತರವಾಗಿ ಆಟವನ್ನು ಆಡಿಸುತ್ತಿದ್ದಾರೆ ಇಲ್ಲಿರುವ ಸಿಸಿ ಕ್ಯಾಮರಾಗಳ ಹಾಗೂ ಇಲ್ಲಿಗೆ ಬರುವ ಸದಸ್ಯರ ಲಿಷ್ಟ ಕಲೆ ಹಾಕಿ ಮಾಹಿತಿ ಪಡೆಯಬೇಕಿದೆ ರಾಜಕಾರಣಿಗಳ ಬೆಂಬಲ ಮೂಲಕ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ಮಾಡುತ್ತಿದ್ದು ಕೂಡಲೇ ಮೇಲಾಧಿಕಾರಿಗಳು ಇದರ ಕಡಿವಾಣಕ್ಕೆ ಮುಂದಾಗಬೇಕು ಇಂತಹ ಅಕ್ರಮಗಳಿಂದ ಸಮಾಜ ಹಾಳಾಗಿ ಹೋಗುವುದು ಮಾತ್ರ ಸತ್ಯದ ವಿಷಯವಾಗಿದೆ