ಬಾಗಲಕೋಟೆ: ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಶನಿವಾರ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಜಿರಪ್ಪ ಕರಿಯಪ್ಪ ಪೂಜಾರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮಿಭಾಯಿ ಬಸವರಾಜ ಆಸಂಗಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಕುರಿತು ನಡೆದ ಈ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಜಿರಪ್ಪ ಕರಿಯಪ್ಪ ಪೂಜಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಲಕ್ಷ್ಮಿಭಾಯಿ ಆಸಂಗಿ ಇವರಿಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಅನ್ವಿತ್ ಕುಮಾರ ಘೋಷಿಸಿದರು.
ಈ ವೇಳೆ ಸಂಘದ ನೂತನ ನಿರ್ದೇಶಕರಾದ ಶ್ರೀ ಅಪ್ಪಾಸಾಹೇಬ ನಾಡಗೌಡರ ಮಾತನಾಡಿ ಈ ಸಹಕಾರಿ ಸಂಘವನ್ನು ನಮ್ಮ ಹಿರಿಯರು ಬಹಳ ಕಷ್ಟಪಟ್ಟು ಕಟ್ಟಿ ಬೆಳೆಸಿದ್ದಾರೆ ಈಗ ನಮಗೆ ಇದರ ಜವಾಬ್ದಾರಿಯನ್ನು ವಹಿಸಿದ್ದಾರೆ ನಾವು ನಮ್ಮ ನಾಯಕರು ಹಾಗೂ ಶಾಸಕರಾದ ಡಾ.ವಿಜಯಾನಂದ ಎಸ್.ಕಾಶಪ್ಪನವರ ನಿರ್ದೇಶನ ಮೇರೆಗೆ ಆಯ್ಕೆಮಾಡಿದ್ದೇವೆ ಎಂದರು.
ಈ ವೇಳೆ ನೂತನವಾಗಿ ಆಯ್ಕೆಯಾದ ಪಿಕೆಪಿಎಸ್ ನ ಸರ್ವಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶೇಖರಯ್ಯ ಮೇಟಿಮಠ ಮತ್ತಿತರರು ಇದ್ದರು.