ಕುಮಾರಸ್ವಾಮೀಯವರು ತಪ್ಪಿದ ಮಾತಿಗೆ ಪಕ್ಷದಿಂದ ಹೊರ ಬಂದೆ:ಮಹಿಮಾ ಪಟೇಲ್  

YDL NEWS
1 Min Read

ನಾರಾಯಣಪುರ ಸಮೀಪದ ನಾಲತವಾಡ. ರಾಜಕಾರಣವೆಂದರೆ ಅದು ಯಾರ ಸ್ವತ್ತೂ ಅಲ್ಲ, ಶುದ್ದತೆಯ ರಾಜಕೀಯ ನನಗೆ ಬೇಕು, ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುವ ನಾಯಕರು ಬೇಕು, ಆದರೆ ಬಿಜೆಪಿ ಯವರಿಗೂ ಅಧಿಕಾರ ಕೊಡುವ ವಿಚಾರದಲ್ಲಿ ಅಂದಿನ ಸಿಎಂ ಜೆಡಿಎಸ್‌ನ ಕುಮಾರಸ್ವಾಮೀಯವರು ತಮ್ಮ ವಚನ ಭ್ರಷ್ಟತೆ ಎತ್ತಿತೋರಿದ ಹಿನ್ನಲೆ ನಾನು ಜೆಡಿಎಸ್ ಪಕ್ಷದಿಂದ ಹೊರ ಬಂದೆ ಎಂದು ಮಾಜಿ ಸಿಎಂ ದಿ.ಜೆ.ಎಚ್.ಪಟೇಲ ಅವರ ಪುತ್ರ ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲ್ ಹೇಳಿದರು.

 

ಪಟ್ಟಣದ ವೀರೇಶ್ವರ ಸಂಸ್ಥೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮೀಯವರಿಗೆ ಅಧಿಕಾರದ ದಾಹದಿಂದ ಯಡಿಯೂರಪ್ಪನವರಿಗೆ ಸಿಎಂ ಆಗಲು ಅವಕಾಶ ಕೊಡಲಿಲ್ಲ ಇಂತಹ ಅಪವಿತ್ರ ರಾಜಕೀಯ ಈ ನಾಡಿನಲ್ಲಿ ಬೇರೂರಬಾರದು, ಇಂದಿನ ರಾಜಕೀಯ ಕಲುಷಿತ ಸ್ಥಿತಿ ನಮ್ಮನ್ನು ತಲೆ ಕೆಳಗೆ ಮಾಡುವಂತಾಗಿದೆ ನನ್ನ ತಂದೆ ಹಾಗೂ ರಾಮಕೃಷ್ಣ ಹೆಗಡೆ ಅವರು ನಾಡಿನ ಒಳಿತಿಗೆ ಮತ್ತು ಅಭಿವೃದ್ದಿಗೆ ರಾಜಕೀಯ ಮಾಡಿದ್ದಾರೆ, ಸದ್ಯ ನಾವೂ ಕೂಡಾ ಸಂಯುಕ್ತ ಜನತಾ ದಳವನ್ನು ವಿಜಯಪುರ ಜಿಲ್ಲೆಯಲ್ಲಿ ಹಂತ ಹಂತವಾಗಿ ಬೇರೆ ಪಕ್ಷದ ಪಾಲಾಗಿರುವ ನಾಯಕರನ್ನು ಹುಡುಕಿ ತಂದು ಶುದ್ದ ರಾಜಕಾರಣಕ್ಕೆ ಪಕ್ಷ ಸಂಘಟನೆಗೆ ಮುಂದಾಗಿತ್ತಿದ್ದೇವೆ ಎಂದರು.

 

ಮನವಿ: ಅಗಲಿದ ದಿ.ದೇಶಮುಖ ದಂಪತಿಗಳ ಮನೆತನದಲ್ಲಿ ಮತ್ತೇ ಅವರ ಕುಡಿಗಳು ರಾಜಕೀಯಕ್ಕೆ ಬರಲು ಒತ್ತಡ ಹಾಕುತ್ತೀದ್ದೇವೆ, ಮುಂದಿನ ದಿನಗಳಲ್ಲಿ ನಾಡಿನಲ್ಲಿ ಶುದ್ದತೆ ತರುವ ನಿಟ್ಟಿನಲ್ಲಿ ಮತ್ತು ಯುವ ಪೀಳಿಗೆಗಳಿಗೆ ಉತ್ತಮ ಸಂಸ್ಕಾರಯುತ ಬದುಕಿಗೆ ಅಕ್ಟೋಬರ್ ತಿಂಗಳಲ್ಲಿ ನಮ್ಮ ತಂದೆಯವರ ಜನ್ಮದಿನದ ಸ್ಮರಣೆಗೆ ‘ಸೂರ್ಯೋದಯ’ ಎನ್ನುವ ಅಭಿಯಾನ ಜಾಥಾ ಹಮ್ಮಿಕೊಂಡಿದ್ದ ದಾವಣಗೇರಿ ಮೂಲಕ ಆರಂಭಗೊಳ್ಳುವ ಅಭಿಯಾನವು ಪರಿಸರ, ಶಿಕ್ಷಣ, ಧರ್ಮ, ಸಾಮಾಜೀಕ ಮತ್ತು ಆರ್ಥಿಕತೆಯಲ್ಲಿ ಶುದ್ದತೆ ತರುವ ಅಂಶಗಳನ್ನು ಹೊಂದಿದೆ ವಿಜಯಪುರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿಕೊಂಡರು. ಈ ವೇಳೆ ಕುಂಟೋಜಿಯ ಡಾ.ಚನ್ನವೀರ ಶಿವಾಚಾರ್ಯರು, ಮುತ್ತು ಅಂಗಡಿ, ಬಸನಗೌಡ ಪಾಟೀಲ, ಶಶಿ ಬಂಗಾರಿ, ಚನ್ನಪ್ಪಗೌಡ ಹಂಪನಗೌಡ್ರ ಸೇರಿದಂತೆ ಹಲವರಿದ್ದರು.

 

ಸುದ್ದಿಗೋಷ್ಟಿಯಲ್ಲಿ ಮಹಿಮಾ ಪಾಟೀಲ್ ಮಾತನಾಡಿದರು.

Share This Article