ದೇಶಮುಖರ ಕುಡಿಗಳು ರಾಜಕೀಯಕ್ಕೆ ಬರಲಿ:ಶಾಸಕ ಶರಣಗೌಡ

YDL NEWS
1 Min Read

ನಾಲತವಾಡ. ಮುಂದಿನ ಚುನಾವಣೆಯಲ್ಲಿ ನಾ ಹೇಳಿದವರಿಗೆ ಮಾತ್ರ ಮತ ಹಾಕಬೇಕು ಅಂದಾಗ ಮಾತ್ರ ದೇಶಮುಖರ ಕಾಲದ ರಾಜಕೀಯ ಮತ್ತೇ ಮರುಕಳಿಸಲು ಸಾಧ್ಯ ಜೊತೆಗೆ ಇಂದಿನ ಕಲುಷಿತ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.

 

ಇಲ್ಲಿಯ ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಮಾಜಿ ಸಚಿವರಾದ ದಿ.ಜೆ.ಎಸ್.ದೇಶಮುಖರ 36ನೇ ಹಾಗೂ ಪತ್ನಿ ವಿಮಲಾಬಾಯಿ ದೇಶಮುಖರ 7ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

 

ಆಧುನೀಕ ರಾಜಕಾರಣ ಇಡೀ ನಾಡನ್ನೇ ಅಪವಿತ್ರಗೊಳಿಸಿದೆ, ಈಗಿನ ಟೀಂ ರಾಜಕೀಯ ನಮಗೆ ಬೇಕಿಲ್ಲ, ಆಸ್ತಿ ಮಾರಿ ಚುನಾವಣೆ ಮಾಡುವ ಜಾಯಮಾನ ನನ್ನದಲ್ಲ, ನಿಮ್ಮ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಹೊಲ ಮನಿ ಮಾರಿ ಚುನಾವಣೆ ಎದುರಿಸುತ್ತಿದ್ದಾರೆ ಆದರೆ ದೇಶಮುಖ ದಂಪತಿಗಳು ಅಂತಹ ರಾಜಕಾರಣ ಮಾಡಲಿಲ್ಲ ಎಂದರು. ನಾನು ಸೋಲಬೇಕು ಎನ್ನುವ ದೃಷ್ಟಿಯಿಂದ ನನ್ನ ಪಕ್ಷದವರೇ ಹಣ ಹಂಚಿದ್ದಾರೆ ಆದರೆ ವಿಜಯಪುರದಲ್ಲಿ ಸಾಬರಿಗೆ ಅವಕಾಶ ಸಿಗಬಾರದು ಎಂದು ಜನ ನನಗೆ ಆಯ್ಕೆ ಮಾಡಿದ್ದಾರೆ ಎಂದ ಅವರು ದೇಶಮುಖರ ಪ್ರಾಮಾಣ ಕ ರಾಜಕಾರಣ ನಮ್ಮ ನಾಡಿಗೆ ಬೇಕಿದೆ ಎಂದರು.

 

ಗುರಮಿಠಕಲ್ ಶಾಸಕ ಶರಣಗೌಡ ಕಂದಕೂರ ಮಾತನಾಡಿ ಜಿಲ್ಲೆಗೆ ರಾಜಕೀಯ ಕ್ಷೇತ್ರ ಬೆಳಗಿಸಿದ ದೇಶಮುಖರ ಕುಡಿಗಳು ಮತ್ತೇ ರಾಜಕಾರಣಕ್ಕೆ ಇಳಿಯಬೇಕು, ದೇಶಮುಖ ದಂಪತಿಗಳು.

Share This Article