ಸುರಪುರ : ತಾಲೂಕಿನ ಏವೂರ
ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಕಟ್ಟಡವು ಇಗೋ ಆಗೋ ಬೀಳುವ ಪರಿಸ್ಥಿತಿ ಯಲ್ಲಿದೆ ಮಳೆ ಬಂದರೆ ಸಾಕು ಅಲ್ಲಲಿ ನೀರು ಸೊರಲು ಆರಂಭ ವಾಗುತ್ತದೆ ಜೀವ ಭಯದಲ್ಲಿ ಶಾಲೆಯ ಮಕ್ಕಳು ಪಾಠ ಕಲಿಯುವ ಪರಿಸ್ಥಿತಿ ಉಂಟಾಗಿದೆ ಈ ಕುರಿತು ಶಾಲೆಯ ಮುಖ್ಯ ಗುರುಗಳು ಸಂಬಂಧಪಟ್ಟ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ್ ಹಾಗೂ ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಯವರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನೆ ಆಗಿಲ್ಲ,
ಸತತವಾಗಿ ಮಳೆ ಸುರಿಯು ತಿರುವುದರಿಂದ ಮಳೆ ನೀರು ಕೋಠಡಿ ಯಲ್ಲಿ ಸುರಿಯುತ್ತಿರು
ವುದರಿಂದ ಮುಂಜಾಗ್ರತವಾಗಿ ಶಾಲಾ ಮಕ್ಕಳಿಗೆ ತರಗತಿ ಗಳಿಂದ ಮನೆಗೆ ಕಳುಹಿಸಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಮಳೆ ನೀರಿಗೆ ಶಾಲಾ ಕಟ್ಟಡ ಕುಸಿದು ರಾಜಸ್ಥಾನದಲ್ಲಿ ವಿದ್ಯಾರ್ಥಿಗಳು ಸಾವನೊಪ್ಪಿದ ಘಟನೆ ಹಾಗೂ ಗಂಭೀರ ಗೊಂಡಿರುವ ಘಟನೆ ನಡೆದಿದೆ ಇಂತಹ ದುರ್ಘಟನೆ ನಡೆಯುವ ಮುಂಚೆ ಜನಪ್ರತಿನಿದಿ ನಗಳು ಆಗಲಿ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಎಚ್ಚೆತ್ತು ಕೊಂಡು ಈ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕೆಕಾಗಿದೆ