ಕೆಂಭಾವಿಯ ಪಟ್ಟಣ ಸಮೀಪದ ಏವೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರನ್ನಾಗಿ ಶರಣಪ್ಪ ಬಡಿಗೇರ್ ಹಾಗೂ ಉಪಾಧ್ಯಕ್ಷರನ್ನಾಗಿ ರೂಪಾ ಚಂದ್ರಶೇಖರ್ ಹಚ್ಯಾಳ ಅವರನ್ನು ಆಯ್ಕೆ ಮಾಡಲಾಯಿತು.
ಏವೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಯಿತು.
ಶಾಲೆಯಲ್ಲಿ ಜರುಗಿದ ಪಾಲಕರ ಸಭೆಯಲ್ಲಿ ಒಮ್ಮತದ ಅಭಿಪ್ರಾಯದ ಮೇರೆಗೆ ಅಧ್ಯಕ್ಷರನ್ನಾಗಿ ಶರಣಪ್ಪ ಬಡಿಗೇರ್ ಹಾಗೂ ಉಪಾಧ್ಯಕ್ಷರನ್ನಾಗಿ ರೂಪಾ ಚಂದ್ರಶೇಖರ್ ಹಚ್ಯಾಳ ಅವರನ್ನು ಆಯ್ಕೆ
ಮಾಡಲಾಯಿತು. ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಶಾಲೆಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ಅಂಬಣ್ಣ , ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪುತ್ರಪ್ಪಗೌಡ ಬಿರಾದರ್ ಮುಖಂಡರಾದ ಎಮ್ ಎಸ್ ಪಾಟೀಲ್ , ವಿಠ್ಠಲ್ ಗ್ರಾಮ ಪಂಚಾಯತಿ ಅಧ್ಯಕ್ಷರು , ಶರಣು ಗೌಡ ಕರ್ನಾಳ, ದೇವಿಂದ್ರಪ್ಪ ದೊರೆ, ಪರಶುರಾಮ ಟಣಕೆದಾರ , ಅಬ್ದುಲ್ ಘನಿ ಸಂತಿ, ಬಸಲಿಂಗಪ್ಪ ಯಡ್ರಾಮಿ , ಜಟ್ಟಪ್ಪ ಹೊಸಮನಿ, ನಾಗೇಶ್ ಬೂದಿಹಾಳ್, ಶಂಕರಗೌಡ ಕೊಂಕಲ್, ಸೇರಿದಂತೆ ಆನೇಕರಿದ್ದರು.