ಚಲಿಸುತ್ತಿದ್ದ ರೈಲಿಗೆ ಮದ್ಯದ ಬಾಟಲ್ ಎಸೆದ ಕಿಡಿಗೇಡಿಗಳು: ಬಾಲಕನಿಗೆ ಗಂಭೀರ ಗಾಯ!

YDL NEWS
1 Min Read

ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಚಲಿಸುತ್ತಿದ್ದ ಹಾಸನ ಸೊಲ್ಲಾಪುರ ರೈಲಿಗೆ ಕಿಡಿಗೇಡಿಗಳು ಮದ್ಯದ ಬಾಟಲ್ ಎಸೆದ ಕಾರಣ ಪ್ರಯಾಣಿಸುತ್ತಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ಸೇರಿರುವ ಘಟನೆ ಭಾನುವಾರ ನಡೆದಿದೆ.

 

 

ಬೆಂಗಳೂರಿನ ಚಿಕ್ಕಬಿದರಕಲ್ ನಿವಾಸಿ ದ್ರುವಂತ್ (13) ಗಂಭೀರವಾಗಿ ಗಾಯಗೊಂಡಿರುವ ಬಾಲಕ ಕುಟುಂಬಸ್ಥರೊಂದಿಗೆ ಭಾನುವಾರ ಆದಿಚುಂಚನಗಿರಿ ದೇವಾಲಯಕ್ಕೆ ತೆರಳಿ ವಾಪಸ್ ಬೆಂಗಳೂರಿಗೆ ತೆರಳಲು ಬೆಳ್ಳೂರು ಕ್ರಾಸ್ ನ ಬಿ.ಜಿ ನಗರ ರೈಲು ನಿಲ್ದಾಣದಲ್ಲಿ ಸಂಜೆ ರೈಲು ಅತ್ತಿ ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ತೆರಳುವ ವೇಳೆ ಉರ್ಕೆಹಳ್ಳಿ ಬಳಿ ಹಾದುಹೋಗಿರುವ ರೈಲ್ವೆ ಹಳಿಯ ಬಳಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ಕೆಲ ಕಿಡಿಗೇಡಿಗಳು ಚಲಿಸುತ್ತಿದ್ದ ರೈಲಿಗೆ ಮದ್ಯದ ಬಾಟಲ್ ಎಸೆದಿದ್ದಾರೆ

 

ಈ ವೇಳೆ ಬಾಟಲ್ ನೇರವಾಗಿ ರೈಲು ಬೋಗಿಯಲ್ಲಿರುವ ತುರ್ತು ಸಂದರ್ಭದಲ್ಲಿ ಬಳಸುವ ಕಿಟಕಿಯ ಬಳಿ ಕುಳಿತಿದ್ದ ಬಾಲಕ ಧ್ರುವಂತ್ ಗೆ ತಲೆಗೆ ಬಡಿದು ಗಂಭೀರ ಗಾಯಗೊಂಡ ಬಾಲಕನನ್ನು ಗಮನಿಸಿದ ತಾಯಿ ಆಘಾತಕ್ಕೆ ಒಳಗಾಗಿದ್ದು ಕೂಡಲೆ ಸಹ ಪ್ರಯಾಣಿಕರು ರೈಲ್ವೆ ಬೋಗಿಯ ತುರ್ತು ಚೈನ್ ಎಳೆದಿದ್ದಾರೆ.

 

ತಕ್ಷಣ ರೈಲು ನಿಲುಗಡೆಯಾಗಿದೆ ಇದನ್ನು ಗಮನಿಸಿದ ಬಾಟಲ್ ಎಸೆದ ಕಿಡಿಗೆಡಿಗಳು ಸ್ಥಳದಿಂದ ಕಾಲ್ಕಿತ್ತಿದ್ದು ಸ್ಥಳಕ್ಕೆ ಬಂದೆ ರೈಲ್ವೆ ಪೊಲೀಸರು ಹಾಗೂ ಅಧಿಕಾರಿಗಳು ಗಾಯಗೊಂಡಿದ್ದ ಬಾಲಕನಿಗೆ ಪ್ರಥಮ ಚಿಕಿತ್ಸೆ ನೀಡಿ ಬಳಿಕ ರೈಲು ಕುಣಿಗಲ್ ಪಟ್ಟಣದ ನಿಲ್ದಾಣಕ್ಕೆ ಬಂದ ಕೂಡಲೆ ಪೋಷಕರು ಬಾಲಕನನ್ನು ಕುಣಿಗಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

 

ಕುಟುಂಬಸ್ಥರ ದೂರು ಹಿನ್ನೆಲೆ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಇನ್ನೂ ರೈಲ್ವೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಕೃತ್ಯ ಎಸಗಿರುವ ಕಿಡಿಗೇಡಿಗಳನ್ನು ಕೂಡಲೆ ಬಂಧಿಸುವಂತೆ ಒತ್ತಾಯಿಸಿದ್ದಾರೆ

Share This Article