ಶಿವಮೊಗ್ಗ: ರಸ್ತೆಯಲ್ಲಿ ದುರಸ್ತಿ ಮಾಡದೆ ಇರುವುದಕ್ಕೆ ಸ್ಥಳೀಯರು ರಸ್ತೆಯಲ್ಲೇ ಭತ್ತ ನಾಟಿಮಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾರಲಗೋಡಿನಿಂದ ಮಪ್ಪನೆ ಹೋಗುವ ರಸ್ತೆಯಲ್ಲಿ ನಡೆದಿದೆ.
ಇತ್ತಿಚೆಗೆ ಸಿಗಂದೂರು ಸೇತುವೆ ಆದ ಕಾರಣ ಸಿಂಗದೂರಿನಿಂದ ಜೋಗ ಫಾಲ್ಸ್ ಗೆ ಸಂಪರ್ಕ ಕಲ್ಪಿಸುವ ಒಂದು ಒಂದೇ ಮಾರ್ಗವಾಗಿದ್ದು, ನಿತ್ಯ ಸ್ಥಳೀಯರು ಮತ್ತು ಪ್ರವಾಸಿಗರು ಸೇರಿ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚಾರ ಮಾಡುತ್ತಾರೆ.
ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆ ಕೆಸರು ಗದ್ದೆಯಂತೆಯೇ ಆಗಿದ್ದು, ಸಂಚಾರ ಮಾಡುವುದಕ್ಕೆ ಸ್ಥಳೀಯರು ಗೋಳಾಡುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಬೇಸತ್ತ ಗ್ರಾಮಸ್ಥರು ಆದಷ್ಟು ಬೇಗ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಮಾಡಿದ್ದರು.ಶಾಸಕರ ಅನುದಾನದ 7-8 ಲಕ್ಷ ಹಣ ದುರುಪಯೋಗ ಅಂತ ಆಗಿದೆ ಇ ಹಿಂದೆ.
ಇದರ ಬಗ್ಗೆ ಸ್ಪಂದಿಸದ ಚುನಾಯಿತ ಪ್ರತಿನಿದಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದ್ದಾರೆ.
ರಸ್ತೆ ದುರಸ್ತಿ ಮಾಡಿ ಎಂದು ಶಾಸಕರು, ಅಧಿಕಾರಿಗಳಲ್ಲಿ ಮರಲಗೋಡು ಸ್ಥಳೀಯರು ಮನವಿ ಮಾಡಿದ್ದಾರೆ. ಆದರೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಿದಾಗ್ಯೂ ಸ್ಪಂದಿಸದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ವಿರುದ್ಧ ಸ್ಥಳೀಯರು ರಸ್ತೆಯಲ್ಲೇ ಭತ್ತ ನಾಡಿ ತಮ್ಮ ಆಕ್ರೋಶವನ್ನು ವಿಭಿನ್ನವಾಗಿ ವ್ಯಕ್ತಪಡಿಸಿದ್ದಾರೆ.