*ಕೂಡ್ಲಿಗಿ : ಎನ್ ಎಲ್ ಸುಮಲತಾರವರಿಗೆ ರಾಜ್ಯ ಮಟ್ಟದ ” ನಕ್ಷತ್ರ ಅಚೀವರ್ ಅವಾರ್ಡ್ “*

YDL NEWS
2 Min Read

 ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ 15 ನೇ ವಾರ್ಡ್ ನಿವಾಸಿಗಳು , ವಾಲ್ಮೀಕಿ ಸಮುದಾಯದ ಪ್ರತಿಭಾನ್ವಿತ ಯುವತಿ ಕುಮಾರಿ ಎನ್ ಎಲ್ ಸುಮಲತಾರವರಿಗೆ. ನಮ್ಮ ನಕ್ಷತ್ರ ಟಿವಿ ಹರಿಹರ ಮಾಧ್ಯಮ ಸಂಸ್ಥೆಯಿಂದ, ಪ್ರತಿ ವರ್ಷವು ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗಣ್ಯರಿಗೆ ಕೊಡ ಮಾಡಲ್ಪಡುವ , ಅಚೀವರ್ ನಕ್ಷತ್ರ ಅವಾರ್ಡ್ ರಾಜ್ಯ ಮಟ್ಟದ ಪ್ರಶಸ್ಥಿಯನ್ನು. ಈ ಭಾರಿ 2025 ನೇ ಅಚೀವರ್ ಅವಾರ್ಡ್ ಪ್ರಶಸ್ಥಿಯನ್ನು , ಕೂಡ್ಲಿಗಿಯ ಎನ್ ಎಲ್ ಸುಮಲತಾರವರಿಗೆ ನೀಡಿ ಗೌರವಿಸಲಾಗಿದೆ. *ಸಾಧಕರಾದ ಕುಮಾರಿ ಎನ್ ಎಲ್ ಸುಮಾರವರ ಕಿರು ಪರಿಚಯ*- ಅವರು ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್ ನವಾಸಿಗಳಾಗಿದ್ದು , ವಾಲ್ಮೀಕಿ ಸಮುದಾಯದ ರೈತ ಕುಟುಂಬದವರಾಗಿದ್ದಾರೆ. ಅವರ ಸಂಪೂರ್ಣ ಹೆಸರು ನಲಿಂಗಯ್ಯನವರ ಎಲ್ ಸುಮಲತ

ತಂದೆ ಏನ್ ಶಿವಕುಮಾರ್ ತಾಯಿ ಪ ಪಂ ಮಾಜಿ ಸದಸ್ಯರಾದ ಏನ್ ಲಕ್ಷ್ಮಿ ದೇವಿಯವರು. ಸುಮಾರವರು ಯೋಗ ವಿಭಾಗದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ರಾಷ್ಟ್ರಿಯ ಯೋಗ ನಿರ್ಣಾಯಕರಾಗಿ , (Nis-ಪಾಟಿ ಯಾಲ ಪಂಜಾಬ್), ಕಾರ್ಯದರ್ಶಿ ವಿಜಯನಗರ ಜಿಲ್ಲಾ ಯೋಗಾಸನ , ಕ್ರೀಡೆ ವಿಜಯನಗರದಲ್ಲಿ ಸೇವೆ ಸಲ್ಲಿಸಿತ್ತಿದ್ದಾರೆ. ಅವರು ಪಂಚಕರ್ಮ , ಆಕ್ಯುಪಂಚರ್, ಆಕ್ಯು ಪ್ರೆಶರ್, ಯೋಗ ತೆರಪಿ ಮಣ್ಣಿನ ತೆರಪಿ, ಅಭ್ಯಂಗ ಚಿಕಿತ್ಸೆಯಲ್ಲಿ ಪರಿಣಿತರಾಗಿದ್ದಾರೆ.

ಜೊತೆ ಜೊತೆಗೆ ಸಂಶೋಧನೆ, ಉತ್ತಮ ಗ್ರಂಥಗಳನ್ನು ಓದುವುದು , ಬರವಣಿಗೆ, ಹಾಕಿ ಕ್ರೀಡೆ ಹೀಗೆ ಅತ್ಯುತ್ತಮ ಹವ್ಯಾಸಗಳನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಅವರ ಗಣನೀಯ ಸೇವೆಯನ್ನು , ಪರಿಗಣಿಸಿ ಯೋಗ ಕಲಾ ಚೇತನ 2025 ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅವರು ಉತ್ತಮ ಲೇಖಕರಾಗಿದ್ದು , ಕೂಡ್ಲಿಗಿ ತಾಲೂಕಿನ ಶಾಸನಗಳ ಸಂಸ್ಕೃತಿ ಅಧ್ಯಯನ , ಕೂಡ್ಲಿಗಿ ತಾಲೂಕಿನ ದೇವಾಲಯಗಳು, ಜಟರದುರಿತ ದಲ್ಲಿ ಯೋಗ ಒಂದು ಅಧ್ಯಯನ ಎಂಬ ಗ್ರಂಥಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಅವರು ನೆರೆ ರಾಜ್ಯಗಳಾದ ಅಸ್ಸಾಮಿನ ಗುವ್ಹಾಟಿ, ತಮಿಳುನಾಡಿನ ತಿರುಚಿ , ಮತ್ತು ರಾಜ್ಯದ ಬೆಂಗಳೂರು , ತುಮಕೂರು , ಮೈಸೂರು , ವಿಜಯನಗರ , ದಾವಣಗೆರೆ ಚಿತ್ರದುರ್ಗ , ಹಾವೇರಿ ಗಳಲ್ಲಿ ಯೋಗ ನಿರ್ಣಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ, ನ್ಯಾಯಾಂಗ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆಗಳ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ. ಯೋಗ ತರಬೇತಿ ಹಾಗೂ , ಇತರೆ ಚಿಕಿತ್ಸೆಗಳ ತರಬೇತಿಗಳನ್ನು ನೀಡಿದ್ದಾರೆ. *ಅಭಿನಂದನೆಗಳ ಮಹಾ ಪೂರ* – ಸಾಧಕಿ ಎನ್ ಎಲ್ ಸುಮಲತಾರವರಿಗೆ , ಇತ್ತೀಚೆಗಷ್ಟೇ ದಾವಣಗೆರೆ ಯಲ್ಲಿ ಜರುಗಿದ. ಬೃಹತ್ ಕಾರ್ಯಕ್ರಮದಲ್ಲಿ , ಅಚೀವರ್ ನಕ್ಷತ್ರ ಅವಾರ್ಡ್ ನೀಡಿ ಗೌರವಿಸಿದ್ದಕ್ಕಾಗಿ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಯ ಗಣ್ಯ ಮಾನ್ಯರು , ಜನಪ್ರತಿನಿಧಿಗಳು , ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಪತ್ರಕರ್ತರು , ಹೋರಾಟಗಾರರು , ಗಣ್ಯ ಮಾನ್ಯರು , ಸುಮಲತಾರವರನ್ನು ಅಭಿನಂದಿಸಿದ್ದಾರೆ. ವಿಜಯನಗರ ಜಿಲ್ಲೆಯ ವಿವಿದೆಡೆಗಳ ಗಣ್ಯಮಾನ್ಯರಿಂದ , ಸುಮಲತಾರವರಿಗೆ ಅಭಿನಂದನೆಗಳ ಮಹಾ ಪೂರವೇ ಹರಿದು ಬಂದಿದೆ. ಸಾಧಕರಾದ ಎನ್ ಎಲ್ ಸುಮಲತಾರವರಿಂದ , ಯಾವುದೇ ಚಿಕಿತ್ಸೆಯ ನೆರವು ಸಲಹೆ ಪಡೆಯಲು ಅವರ ಮೊ ನಂ 95387 22430 ಸಂಪರ್ಕಿಸಬಜುದಾಗಿದೆ. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

Share This Article