*ಅಗ್ನಿಶಾಮಕ ದಳದ ಮೂವರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಶ್ಲಾಘನೀಯ ಸೇವಾ ಪದಕ*

YDL NEWS
1 Min Read

ಬೆಂಗಳೂರು, ಆಗಸ್ಟ್ 14 : 2025ನೇ ಸಾಲಿನ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ರಾಷ್ಟ್ರದಾದ್ಯಂತ ಗೌರವಾನ್ವಿತ “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪ್ರಶಸ್ತಿ”ಗಳನ್ನು ನೀಡಿದ್ದು, ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಮೂವರು ಅಧಿಕಾರಿಗಳು “ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಶ್ಲಾಘನೀಯ ಸೇವಾ ಪದಕ”ಕ್ಕೆ ಭಾಜನರಾಗಿದ್ದಾರೆ.

 

ಯಾದಗಿರಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ -1799 ನ ಚಿದಾನಂದ ಪರ್ವತಯ್ಯಾ ಹಿರೇಮಠ, ಜೇವರ್ಗಿ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ-1854 ನ ಮಲ್ಲಿಕಾರ್ಜುನ ಹಣಮಂತಗೊಳ, ಅಂಜನಾಪುರ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕ-2264ನ ಮಧುಸೂಧನ ಟಿ.ಎಂ ಅವರು ಭಾಜನರಾಗಿದ್ದಾರೆ ಎಂದು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ತರಬೇತಿ ಮತ್ತು ಎಸ್.ಡಿ.ಆರ್.ಎಫ್ ನ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article