ಜೈನಾಪುರ ಗ್ರಾಮದಲ್ಲಿ ನೀರಿಗಾಗಿ ಹಾಹಾಕಾರ : ದಲಿತರ ಸಮಸ್ಯೆ ಹಾಲಿಸದ ಪಂಚಾಯತ್ pdo ಮತ್ತು ಸದಸ್ಯರು

KTN Admin
1 Min Read

ಸುರಪುರ :  ಜೈನಪುರದಲ್ಲಿ ನೀರಿಗಾಗಿ ಹಾಹಾಕಾರ.ಜೈನಾಪುರ ಗ್ರಾಮವು ಹೆಗ್ಗನದೊಡ್ಡಿ ಪಂಚಾಯತಿ ವ್ಯಾಪ್ತಿಯಲ್ಲಿದಿಯೋ ಇಲ್ಲವೋ ಅನುಮಾನ ಆಗುತ್ತಿದೆ. ಜೈನಪುರಕ್ಕೆ ಯಾವುದೇ ರೀತಿಯ ಅಭಿರುದ್ದಿ ಕಾಮಗಾರಿಗಳಿಲ್ಲ.ಜನರಿಗೆ ಸತತವಾಗಿ 3 ದಿನದಿಂದ ಜನರು ನೀರಿಗಾಗಿ ಪರದಾಡುತ್ತಿದ್ದಾರೆ.ಗ್ರಾಮಪಂಚಾಯತ್ ಸದಸ್ಯರು ಇದ್ದಾರೋ ಸತ್ತಿದ್ದಾರೋ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಊರಿನಲ್ಲಿ ಇರೋದು ಒಂದೇ ನಳ.ಹಣಮವ್ವ ಹರಿಜನ್ ಅವರ ಮನೆಹತ್ತಿರ ಒಂದು ಬೋರೆವೆಲ್ ಇದೆ.ಆ ಬೋರಿಗೆ ನೀರುತರಲು ಹೋದರೆ ನಮ್ಮ ಬೋರಿಗೆ ಬರಬೇಡಿ.ಕೆಟ್ಟರೆ ಯಾರು ಮಾಡಿಸಿಕೊಡಲ್ಲ.ನಾವು ನಿಮ್ಮ ಬೋರೆವೆಲ್ ಗೆ ಬಂದರೆ ನಮ್ಮನ್ನ ಮುಟ್ಟಿಸಿಕೊಳ್ಳುವುದಿಲ್ಲ.ನಮ್ಮ ಬೋರ್ ಮುಟ್ಟಬೇಡಿ ಎಂದು ಜಾತಿತಾರತಮ್ಯ ಮಾಡುತ್ತೀರಿ.ನೀವು pdo,ಪಂಚಾಯತ್ ಸದಸ್ಯರ ಗಮನಕ್ಕೆ ತನ್ನಿ ಎಂದು ಹೇಳುತ್ತಿದ್ದಾರೆ.ಹಳೆ ಬೋರೆವೆಲ್ ರಿಪೇರಿ ಮಾಡ್ಬೇಕು.ಅದರ ಜೊತೆಗೆ ನೀರಿನ ಸಮಸ್ಯೆ ಪರಿಹರಿಸಲು ಇನ್ನೊಂದು ಬೋರೆವೆಲ್ ಕೊರೆಸಬೇಕು ಕೂಡಲೇ ಅಭಿರುದ್ದಿ ಅಧಿಕಾರಿಗಳು,ಗ್ರಾಮಪಂಚಾಯತಿ ಸದಸ್ಯರು ಜನರು ರೊಚ್ಚಿಗೆಳುವ ಮುಂಚಿತವಾಗಿ ಎಚ್ಚತ್ತುಕೊಂಡು ಸಮಸ್ಯೆಯನ್ನು ಪರಿಹರಿಸಬೇಕು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ