ಯಾದಗಿರಿ ಜಿಲ್ಲಾ ತಳವಾರ ಹಿತ ರಕ್ಷಣಾ ಸಮಿತಿ ಜಿಲ್ಲಾ ಅಧ್ಯಕ್ಷರಾದ ಶ್ರೀ ದೊಡ್ಡಪ್ಪ. ಎಚ್ ತಳವಾರ ಸಾ ಮುದನೂರು ತಾ ಸುರಪುರ ಜಿಲ್ಲಾ ಯಾದಗಿರಿ ರವರು
ತಮ್ಮೆಲ್ಲರಲ್ಲಿ ಕೋರಿಕೊಳ್ಳುವುದೇನೆಂದರೆ ಯಾದಗಿರಿ ಜಿಲ್ಲೆಯ ಸುರಪುರ ಶಹಾಪುರ ಹುಣಸಗಿ ಮತ್ತು ವಡಗೆರ ಯಾದಗಿರಿ ಹಾಗೂ ಗುರುಮಠಕಲ್ ತಾಲೂಕು ಗಳ ಕೋಲಿ ,ಕಬ್ಬಲಿಗ, ತಳವಾರ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಹಾಗೂ ಸಮಸ್ತ ಯಾದಗಿರಿ ಜಿಲ್ಲಾ ತಳವಾರ್ ಸಮಾಜದ ಪದಾಧಿಕಾರಿಗಳು ಹಾಗೂ ಯುವಕರು ಮಹಿಳೆಯರು ಮತ್ತು ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸು ತಕ್ಕಂತ ಸರ್ಕಾರಿ ಎಲ್ಲರೂ ಸಮಾಜದ ಶ್ರೇಯೋಭಿವೃದ್ಧಿಗೆ ಸಮಾಜದಲ್ಲಿ ನಡೆಯುವ ಜಲಂತ ಸಮಸ್ಯೆಗಳ ಕುರಿತು ಸಮಾಜದ ಮೇಲೆ ಆಗುತ್ತಿರುವ ಅನ್ಯಾಯ ದ ಎದುರು ಕಾನೂನಾತ್ಮಕ ಹೋರಾಟದ ಬಗ್ಗೆ ಚಿಂತನ ಮಂಥನ ಚರ್ಚಾ ಕಾರ್ಯಗಾರವನ್ನೂ ದಿನಾಂಕ 31 /03/ 2024 ರಂದು ಸಮಯ ಬೆಳಿಗ್ಗೆ 10 :00 ಗಂಟೆ ಗೆ ಶಹಾಪುರ ನಗರದಲ್ಲಿ ವಿಶೇಷ ಸಭೆ ಕರೆದಿದ್ದು ಆದಕಾರಣ ಈ ಒಂದು ಸಭೆಗೆ ವಿಶೇಷ ಆಹ್ವಾನಿತರಾಗಿ ಶ್ರೀ ಸಿದ್ದಣ್ಣ ಐರಾವಡಗಿ ಹಾಗೂ ಡಾ ಸರ್ದಾರ್ ರಾಯಪ್ಪಣ್ಣ ಮತ್ತು ಇನ್ನಿತರ ಜಿಲ್ಲಾ ಮುಖಂಡರು ಸಮಾಜ ಚಿಂತಕರು ಹಿರಿಯರು ಹೋರಾಟಗಾರರು ಸಂಘಟಕರು ಸಮಾಜ ಸೇವಕರು ಪ್ರತಿಯೊಬ್ಬರು ಈ ಸಭೆಗೆ ಬರುತ್ತಿದ್ದು ಆದ್ದರಿಂದ ಯಾದಗಿರಿ ಜಿಲ್ಲೆಯ ಸುರಪುರ ಶಹಾಪುರ ಹುಣಸಗಿ ಹಾಗೂ ಯಾದಗಿರ್ ವಡಗೆರ ಮತ್ತು ಗುರುಮಟ್ಕಲ ತಾಲೂಕಿನ ಕೋಲಿ ಕಬ್ಬಲಿಗ ತಳವಾರ ಸಮಾಜದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರತಿಯೊಬ್ಬರು ಇದರಲ್ಲಿ ಭಾಗವಹಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸೋಣ
ಶಿಕ್ಷಣವೇ ಶಕ್ತಿ ಹೋರಾಟವೇ ಅಸ್ತ್ರ ಎಂಬ ಘೋಷ ವಾಕ್ಯದೊಂದಿಗೆ ಈ ಸಭೆಯನ್ನು ಯಶಸ್ವಿ ಮಾಡೋಣ ಎಂದು ತಮ್ಮೆಲ್ಲರಲ್ಲಿ ಕೋರಿಕೆ🙏🙏🙏
ಇಂತಿ ನಿಮ್ಮ ದೊಡ್ಡಪ್ಪ ತಳವಾರ್ ಜಿಲ್ಲಾ ಅಧ್ಯಕ್ಷರು