ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಸಂಕೋನಟ್ಟಿ ಗ್ರಾಮದಲ್ಲಿ ಗಜೇಂದ್ರ ಮಾರುತಿ ಹುರಳೆ ಎಂಬುವವರ ಬಾವಿಯೊಂದರಲ್ಲಿ ಗ್ರಾಮದ ಸಾಕು ಕುದುರೆ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 02/04/2024 ರಂದು ಬೆಳಗಿನ ಜಾವ ಸಮಯ 08:00ಕ್ಕೆ ಮಂಗಳವಾರ ನಡೆದಿದೆ. ತಕ್ಷಣ ಸಂಕೋನಟ್ಟಿ ಗ್ರಾಮದ ಸ್ಥಳೀಯರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದಾಕ್ಷಣ ಘಟನಾ ಸ್ಥಳಕ್ಕೆ ಜಲವಾಹನ ಮತ್ತು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿರವರ ನೇತೃತ್ವದಲ್ಲಿ ಘಟನಾ ಸ್ಥಳಕ್ಕೆ ರಕ್ಷಣಾ ಸಾಮಗ್ರಿಗಳೊಂದಿಗೆ ಆಗಮಿಸಿ 40 ಅಡಿ ಅಳತೆಯ 30×50 ವಿಸ್ತೀಣ೯ದ ಅದರಲ್ಲಿ ಸುಮಾರು 04 ಅಡಿ ಆಳದ ನೀರಿರುವ ಬಾವಿಯಲ್ಲಿ ಬಿದ್ದ ಕುದುರೆಯನ್ನು ಪ್ರಾಣ ಪಣಕ್ಕೆ ಇಟ್ಟು ಪಟ್ಟು ಸುಮಾರು 01:00 ಒಂದೂ ಗಂಟೆಗಳ ಕಾರ್ಯಚರಣೆಯನ್ನು ಮಾಡಿ ಕುದುರೆಯನ್ನು ಜೀವಂತವಾಗಿ ಬಾವಿಯಿಂದ ಹೊರ ತೆಗೆದು ರಕ್ಷಣೆ ಮಾಡಲಾಯಿತು.
ಕುದರೆಯ ಪ್ರಾಣ ಕಾಪಡಿದ ಅಥಣಿ ಅಗ್ನಿಶಾಮಕ ಇಲಾಖೆಗೆ ಸಿಬ್ಬಂದಿ ಯವರುಗಳಿಗೆ ಸೇರಿದ ಜನ ಚಪ್ಪಾಳೆ ಮೂಲಕ ಧನ್ಯವಾದಗಳು ತಿಳಿಸಿದರು.ತಮ್ಮ ಪ್ರಾಣ ಪಣಕ್ಕೆ ಇಟ್ಟು ಜೀವ ಉಳಿಸಿವ ಕೆಲಸ ಅಗ್ನಿಶಾಮಕ ದಳದವರು ಮಾಡುತ್ತಾರೆ ಅವರ ಸೇವೆ ಅಮೋಘ ಎಂದು ಬಣಿಸಿದರು.
ಈ ರಕ್ಷಣಾ ಕಾರ್ಯಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಯಾದ ಮಲ್ಲಿಕಾರ್ಜುನ ಬಂದಾಳ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ನಿಲ್ಲಪ್ಪ.ಎಸ್ .ಹೆರವಾಡೆ ಶಿವಾನಂದ.ಪೂಜಾರಿ ಸಂಜೀವ.ಚೌಗಲಾ ಶಿವಯ್ಯ ಮಠಪತಿ ಸಂತೋಷ್ .ಚೌಗಲಾ ಮತ್ತು ಸ್ಥಳೀಯರು ಕಾರ್ಯಾಚರಣೆ ಭಾಗವಸಿದರು.