ಸುರಪುರ ತಿಪ್ಪನಟಗಿ ಗ್ರಾಮದ ಯುವ ರೈತ ಸಿಡಿಲಿಗೆ ಬಲಿಯಾದ ಘಟನೆ ಬೇಸಿಗೆ ಕಾಲದಲ್ಲಿಯೂ ಗುಡುಗು ಸಿಡಿಲಿಗೆ ಇವ ರೈತ ಬಲಿಯಾದ ಘಟನೆ ತಿಪ್ಪನಟಗಿ ಗ್ರಾಮದ ಹೊರವಲಯದಲ್ಲಿ ಶನಿವಾರ ಸಂಜೆ ಸಂಭವಿಸಿದೆ ತಿಪ್ಪನಟಗಿ ಗ್ರಾಮದ ಮಂಜುನಾಥ ತಂದೆ ಮಾನಪ್ಪ 22 ವಯಸ್ಸು ಸಿಡಿಲಿಗೆ ಬಲಿಯಾದ ಯುವ ರೈತ ಎಂದಿನಂತೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂಜೆ ಮಳೆ ಬರುವ ಸಂದರ್ಭದಲ್ಲಿ ಮಳೆಯ ರಕ್ಷಣೆ ಪಡೆಯಲು ತಮ್ಮ ಹೊಲದಲ್ಲಿರುವ ಹುಣಸೆ ಗಿಡದ ಹತ್ತಿರ ನಿಂತುಕೊಂಡಿದ್ದ ಆ ಸಂದರ್ಭದಲ್ಲಿ ಸಿಡಿಲು ಮರಕ್ಕೆ ಹೊಡೆದು ಇವ ರೈತ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ