ಹುಬ್ಬಳ್ಳಿ :: ಹುಬ್ಬಳ್ಳಿ ನಗರದಲ್ಲಿ ವಾಸವಿದ ಅಂಜಲಿ ಅಂಬಿಗೇರ ಎಂಬ ಕೋಲಿ ಸಮಾಜದ ಯುವತಿಯನ್ನು ಪ್ರೀತಿಸುವಂತೆ ಒತ್ತಾಯ ಮಾಡಿ,ಯುವತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಕೊಂದಿದ್ದುರಿವ ಆರೋಪಿಯನ್ನು ಹುಬ್ಬಳ್ಳಿಯ ಚನ್ನಮ್ಮ ಸರ್ಕಲ್ ನಲ್ಲಿ ಸಾರ್ವಜನಿಕರ ಎದ್ದುರೆ ಗಲ್ಲಿಗೇರಿಸಬೇಕು ಎಂದು ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ (ರಿ) ಯಾದಗಿರಿ ಜಿಲ್ಲಾಧ್ಯಕ್ಷರಾದ ಧನರಾಜಗೌಡ ಆಗ್ರಹಿಸಿದ್ದಾರೆ.
ಅಂಜಲಿ ಅಂಬಿಗೇರ ಕೋಲಿ ಸಮಾಜದ ಯುವತಿಯಾಗಿದು ಕೋಲಿ ಸಮಾಜಕ್ಕೆ ರಕ್ಷಣೆ ಇಲ್ಲದಂತಾಗಿದೆ. ಯುವತಿಯನ್ನು ಕೊಲೆ ಮಾಡಿರುವ ಆರೋಪಿಯನ್ನು ಎನ್ಕೌಂಟರ್ ಮಾಡಬೇಕು ಇಲ್ಲವೇ ಸಾರ್ವಜನಿಕವಾಗ ಗಲ್ಲಿಗೇರಿಸಿದ್ದಾಗ ಮಾತ್ರ ಯುವತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ. ಅಂಜಲಿ ಅಂಬಿಗೇರ ಕುಟುಂಬಕ್ಕೆ ಸರ್ಕಾರ ರಕ್ಷಣೆ ಕೊಡುವುಬೇಕು ಮತ್ತು 50 ಲಕ್ಷ ಪರಿಹಾರ ಕೊಡಬೇಕೆಂದು ಧನರಾಜಗೌಡ ಎಸ್ ಪಾಟೀಲ್ ರಾಜ್ಯ ಬುಡಕಟ್ಟು ಸಂರಕ್ಷಣಾ ಸಮಿತಿ (ರಿ) ಜಿಲ್ಲಾಧ್ಯಕ್ಷರು ಯಾದಗಿರ ಒತ್ತಾಯಿಸಿದ್ದಾರೆ.