ಅಂಜಲಿ ಅಂಬಿಗೇರ ಬರ್ಬರ ಕೊಲೆ ಸೇಡಂ ಕೋಲಿ ಸಮಾಜ ಖಂಡನೆ

KTN Admin
1 Min Read

ಸೇಡಂ, ಮೇ,17: ಹುಬ್ಬಳ್ಳಿಯಲ್ಲಿ ನಡೆದ ಕು.ಅಂಜಲಿ ಅಂಬಿಗೇರ ಅವಳ ಹತ್ಯೆಯನ್ನು ಖಂಡಿಸಿ, ಕೂಡಲೇ ಆರೋಪಗಳನ್ನು ಬಂಧಿಸಿ ಸಂತ್ರಸ್ಥರ ಕುಟುಂಬಕ್ಕೆ ಸೂಕ್ತ ರಕ್ಷಣೆಯ ಜೊತೆಗೆ ಸರಕಾರಿ, ನೌಕರಿ, ಒಂದು ಕೋಟಿ ರೂಪಾಯಿ ಪರಿಹಾರವನ್ನು ಸರಕಾರ ವಿತರಿಸಬೇಕು ಎಂದು ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ತಾಲೂಕ ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮೆಕ್ಯಾನಿಕ್ ಹಾಗೂ ಸರ್ವ ಕೋಲಿ ಕಬ್ಬಲಿಗ ಸಮಾಜದವರ ವತಿಯಿಂದ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆಯಲ್ಲಿ ಕಬ್ಬಲಿಗ ಸಮಾಜದ ಮಹಿಳಾ ಮುಖಂಡರಾದ  ಇಂದುಮತಿ ಭಾಗೋಡಿ, ಶ್ರೀ ಅಶೋಕ ದಂಡೋತಿ, ಶ್ರೀ ಭೀಮರಾಯ ಹಣಮನಹಳ್ಳಿ, ಶ್ರೀ ಮಹಾದೇವ ಗೋಣಿ, ಶ್ರೀ ಮಾಣಿಕರಾವ ಊಡಗಿ, ಶ್ರೀ ಶರಣಪ್ಪ ಊಡಗಿ, ಶ್ರೀ ಸತೀಶ್ ತಳವಾರ ಕುರಕುಂಟಾ, ಶ್ರೀಮತಿ ಸುನೀತಾ  ಶ್ರೀ ಮೌನೇಶ ಬೆನಕನಹಳ್ಳಿ, ಶ್ರೀ ಬಸವರಾಜ ಮಲಘಾಣ ಇತರರೂ ಇದ್ದರು.

Share This Article
Follow:
ಕನ್ನಡ ನಾಡಿನ ಧ್ವನಿ ಕನ್ನಡ ಟುಡೇ ನ್ಯೂಸ ಕರ್ನಾಟಕ ಸಮಗ್ರ ಸುದ್ದಿಗಳನ್ನು ಜನರಗೆ ತಲುಪಿಸಲು ನಿತ್ಯ ನಿರಂತರ ಕಾರ್ಯೋನ್ಮುಖರಾಗಿರುವ ಕನ್ನಡ ನಾಡಿನ ಹೆಮ್ಮೆಯ ಚಾನಲ್ KR-23-0000388 ಭಾರತ ಸರ್ಕಾರದ ಮಾನ್ಯತೆಯ ಹೊಂದಿದ ಚಾನಲ್ ಆಗಿದು MIB ನಿಯಮಗಳ ಅಧೀನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದೆ