ಕೆಂಭಾವಿ ಪಟ್ಟಣದ ಹಲವೆಡೆ 69 ನೇ ಕನ್ನಡ ರಾಜ್ಯೋತ್ಸವ : ನಮ್ಮ ಕರ್ನಾಟಕ ಸೇನ ಅಧ್ಯಕ್ಷ ಬಾಪುಗೌಡ ಅನ್ವರ್ ಧ್ವಜಾರೋಹಣ.
ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಏವೂರ ಗ್ರಾಮದಲ್ಲಿ
ಇಂದು 69 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಗ್ರಾಮ ಘಟಕ ಅಧ್ಯಕ್ಷರಾದ ಅಧ್ಯಕ್ಷ ಬಾಪುಗೌಡ ಅನ್ವರ್ ಧ್ವಜಾರೋಹಣ ನೇರವೇರಿಸಿದ
ಇಂದು ಕರುನಾಡ ಕನ್ನಡಿಗರ ಹೆಮ್ಮೆಯ ದಿನ, ಹಲವಾರು ಮಹನೀಯರ ಹೋರಾಟ, ತ್ಯಾಗ,ಬಲಿದಾನದಿಂದ ನಮ್ಮ ಚೆಲುವ ಕನ್ನಡ ನಾಡು ಉದಯವಾದ ಕನ್ನಡ ರಾಜ್ಯೋತ್ಸವ ಹಬ್ಬ ಈ ಶುಭ ದಿನದಂದು ನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವ ಶುಭಾಷಯಗಳನ್ನು ಕೋರುತ್ತಾ.
ಕರ್ನಾಟಕ ಏಕೀಕರಣಕ್ಕಾಗಿ ನಡೆ ಚಳುವಳಿಯ ಕಾವು ಹೆಚ್ಚಾದಾಗ 1956 ನವೆಂಬರ್ 1 ರಂದು ಮದ್ರಾಸ್, ಮುಂಬೈ,ಹೈದ್ರಾಬಾದ್, ಪ್ರಾಂತ್ಯದಲ್ಲಿರುವ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಅಖಂಡ ಮೈಸೂರು ರಾಜ್ಯ ಉದಯವಾಯಿತು.
ಉತ್ತರ ಕರ್ನಾಟಕ ಭಾಗದ ಜನತೆಯ ಮಾನ್ಯತೆಗಾಗಿ ರಾಜ್ಯದ ಹೆಸರನ್ನು ಮೈಸೂರು ಬದಲಾಗಿ ಕರ್ನಾಟಕ ಎಂದು ಮರು ನಾಮಕರಣ ಮಾಡಬೇಕು ಎಂದು 1972 ಜುಲೈ ತಿಂಗಳಿನಲ್ಲಿ ಚಳುವಳಿ ನಡೆದ ಈ ದೀರ್ಘಾವಧಿಯ ಕಾಲದ ಚರ್ಚೆಗಳ ನಂತರ 1973 ನವೆಂಬರ್ 1 ರಂದು ರಾಜ್ಯ ವಿಧಾನಸಭೆಯಲ್ಲಿ ಇದಕ್ಕೆ ಸರ್ವಾನುಮತದಿಂದ ಅನುಮತಿ ಪಡೆದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರು ನಾಮಕರಣ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ಎಮ್ ಎಸ್ ಪಾಟೀಲ್, ರಾಜ್ಯ ವೀರ ರಾಯಪ್ಪ ರಾಜು ದಣಿ, ರಾಚಪ್ಪ ಸಾಹುಕಾರ,ಸುಭಾಷ್ ಗೌಡ ದಳಪತಿ, ಶರಣಗೌಡ ಕರ್ನಾಳ್ , ದೇವಿಂದ್ರಪ್ಪ ದೊರೆ, ಶಂಕ್ರಣ್ಣ ಕೊಂಕಲ್ ,ಶಾಂತಯ್ಯಗುತ್ತೇದಾರ್,ಬಂದೇನವಾಜ್ ವನದುರ್ಗ, ಜಟ್ಟಪ್ಪ ಹೊಸ್ಮನಿ ಬಾಬುಸಾಬ್ ಬಾಚಿಮಡಿ , ಲಕ್ಷ್ಮಣ ಗುಡಿಮನಿ , ನಮ್ಮ ಕರ್ನಾಟಕ ಸೇನೆಯ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಸಂಘಟನೆಯ ಮುಖಂಡರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು